ಭದ್ರಾ ನೀರಿಗಾಗಿ ಬೀದಿಗಿಳಿದ ಸಹಸ್ರಾರು ವಿದ್ಯಾರ್ಥಿಗಳು
* ಯುವಕರ ನೇತೃತ್ವದಲ್ಲಿ ಸಾಗಿದ ಹೋರಾಟ // 8 ಮಂದಿ ಮಠಾಧೀಶರ ಸಾಥ್
* 18 ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ
*ನೀರಾವರಿ ಹೋರಾಟ ಸಮಿತಿಯ ವಿದ್ಯಾರ್ಥಿ ಹಾಗೂ ಯುವ ಘಟಕದ ಕಹಳೆ
ಚಿತ್ರದುರ್ಗಕ್ಕೆ ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ 23.08.2006 ರಲ್ಲಿ ಹಿರಿಯೂರಿನಲ್ಲಿ ನಡೆದ ಬೃಹತ್ ಚಳುವಳಿ ಅಕ್ಷರಶಃ ಹೋರಾಟದ ಕಿಚ್ಚನ್ನು ವಿದ್ಯಾರ್ಥಿಗಳಲ್ಲಿ ಹಾಗೂ ಯುವ ಜನರಲ್ಲಿ ತುಂಬುವಲ್ಲಿ ಯಶಸ್ವಿಯಾಯಿತು. ಹಿರಿಯೂರು ಜನತೆಯ ನೀರುಣಿಸುವ ತಾಯಿ ವಾಣಿವಿಲಾಸ ಜಲಾಶಯಕ್ಕೆ ನೀರು ಹರಿಸ ಕೂಗು ತಾಲೂಕಿನಾದ್ಯಂತ ಮೊಳಗಿತು. ಅಲ್ಲದೆ ಅಂತಹ ಬೃಹತ್ ಪ್ರತಿಭಟನೆ ಇಲ್ಲಿವರೆಗೂ ಯಾವುದೂ ನಡೆದಿಲ್ಲ ಎಂಬುದು ಇನ್ನೊಂದು ವಿಶೇಷ.
ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಯಣ್ಣ ಹಾಗೂ ಸಂಚಾಲಕ ಡಾ. ಬಂಜಗೆರೆ ಜಯಪ್ರಕಾಶ್, ಮುರುಘಾ ರಾಜೇಂದ್ರ ಒಡೆಯರ್ ಅವರ ಗರಡಿಯಲ್ಲಿದ್ದುಕೊಂಡು ಕಾನೂನು ಪದವಿ ಅಧ್ಯಯನ ಮಾಡುತ್ತಿದ್ದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ, ಪತ್ರಕರ್ತ ಹರ್ತಿಕೋಟೆ ಮಾಲತೇಶ್ ಅರಸ್‌ಗೆ ನೀರಾವರಿ ಹೋರಾಟ ಸಮಿತಿಯ ವಿದ್ಯಾರ್ಥಿ ಹಾಗೂ ಯುವ ಘಟಕದ ಸಂಚಾಲಕರನ್ನಾಗಿ ನೇಮಿಸಲಾಯಿತು. ಬಹಿರಂಗ ಸಭೆಯಲ್ಲಿ ಹೋರಾಟಕ್ಕೀಳಿಯಬೇಕೆಂದು ಸೂಚಿಸಿದ ಬೆನಲ್ಲೆ ಕ್ಷಣದಿಂದ ಹಟ ಬಿದ್ದಂತೆ ಹೋರಾಟಕ್ಕೆ ನಿಂತದ್ದು ಅವಿಸ್ಮರಣೀಯ.
ಹೀಗೆ ಹೋರಾಟ ರೂಪುರೇಷೆಗಳನ್ನ ಸಂಗ್ರಹಿಸಿದ ಮಾಲತೇಶ್ ಅರಸ್, ವಂದೇ ಮಾತರಂ ರಾಜ್ಯ ಸಂಘಟನೆಯ ರಾಜ್ಯಾಧ್ಯಕ್ಷರ ಎಂ. ಡಿ. ಗೌಡ, ಅರುಣ್ ಕುಮಾರ್. ತಾಲೂಕು ಅಧ್ಯಕ್ಷ ಎಂ.ಎಲ್ ಗಿರೀಶ್, ಮಸ್ಕಲ್ ಗೌಡ, ಚಿತ್ರದುರ್ಗ ಜಿಲ್ಲಾ ಯುವಜನ ಒಕ್ಕೂಟದ ಗೌರವಾಧ್ಯಕ್ಷರಾಗಿದ್ದ ಶ್ರೀ ಷಡಾಕ್ಷರ ಮುನಿ, ಅಧ್ಯಕ್ಷ ಚಮನ್ ಷರೀಪ್ ಸೇರಿ ಹಿರಿಯೂರು ಪಟ್ಟಣ ಸೇರಿದಂತೆ ತಾಲೂಕಿನ 18 ಶಾಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಹಾಗೂ ಯುವಕನ್ನು ಸಂಘಟಿಸಿ ಬೃಹತ್ ಚಳುವಳಿ ರೂಪಿಸಿದರು.
ಇಂತಹ ಚಳುವಳಿಯನ್ನು ಹೇಗೆ ಮಾಡಬೇಕೆಂದಾಗ ಸಹಾಯಕ್ಕೆ ನಿಂತದ್ದು ಹಿರಿಯೂರು ಪತ್ರಕರ್ತರಾದ ಎಂ.ಜಿ. ರಂಗಸ್ವಾಮಿ, ಹರಿಯಬ್ಬೆ ಹೆಂಜಾರಪ್ಪ, ಎನ್.ಎಲ್ ಬಸವರಾಜ್ ಅವರ ಸಲಹೆ ಮೇರೆಗೆ ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರು, ಆದಿ ಜಾಂಬವ ಮಠದ ಹಿರಿಯ ಶ್ರೀಗಳು, ಕುಂಚಿಟಿಗ ಮಠದ ಶ್ರೀ ಶಾಂತವೀರ ಮಹಾಸ್ವಾಮೀಜಿ, ಯಾದವಾನಂದ ಶ್ರೀಗಳು ಹಾಗೂ ಅಸಂಷನ್ ಚರ್ಚಿನ ಫಾದರ್, ಮುಸ್ಲಿಂ ಗುರುಗಳನ್ನು ಸೇರಿಸಿ ಹಿರಿಯೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ವಿದ್ಯಾರ್ಥಿ ಶಕ್ತಿ: ಹಿರಿಯೂರಿನಲ್ಲಿ ಎಂದೂ ಕಾಣದ ವಿದ್ಯಾರ್ಥಿ ಶಕ್ತಿ ನೀರಿಗಾಗಿ ಅಂದು ಬೀದಿಗಿಳಿದಿತ್ತು. ಇಂದು ವಿದ್ಯಾರ್ಥಿಗಳಾಗಿದ್ದ ಇನ್ನು ಹತ್ತು ವರ್ಷಗಳಲ್ಲಿ ನೀವೆಲ್ಲ ಗೃಹಿಣಿಯರಾಗಿ, ವಿವಾಹಿತರಾದಾಗ ನೀರಿನ ಸಮಸ್ಯೆ ಬರದಿರಲೆಂದು ಈ ಹೋರಾಟ ಎಂದಾಗ ಎನ್ನಷ್ಟು ಕಹಳೆ ಮೊಳಗಿತ್ತು.
ಪತ್ರ ಚಳುವಳಿ: ಇದೇ ವೇಳೆ ಎಲ್ಲಾ ಶಾಲಾ ಕಾಲೇಜುಗಳಲ್ಲೂ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ವಿದ್ಯಾರ್ಥಿ ಹಾಗೂ ಯುವ ಘಟಕದ ಸಂಚಾಲಕ ಮಾಲತೇಶ್ ಅರಸ್ ವಿನೂತನವಾದ ಪತ್ರ ಚಳುವಳಿಯನ್ನು ಕೈಗೊಂಡರು. ಸುಮಾರು 22 ಸಾವಿರ ಕಾರ್ಡಿನಲ್ಲಿ ಬರೆದ ಪತ್ರಗಳನ್ನು ಅಂದಿನ ರಾಜ್ಯಪಾಲರಿಗೆ ತಲುಪಿಸಲಾಯಿತು. ಇಂತಹ ಪತ್ರ ಚಳುವಳಿಗೆ ಅಂದು ಎಲ್ಲಾ ಶಿಕ್ಷಕರು ಸ್ಪಂದಿಸಿದ್ದರು.
No comments:
Post a Comment