Wednesday, January 28, 2015
Sunday, January 25, 2015
ಹಾಲುಮತ ಕುರುಬ ಮತ್ತು ಲಿಂಗವಂತ
ಸಂಶೋಧನೆಯ ಲೇಖನಗಳಲ್ಲ, ತೀರ್ಪಿನ ಲೇಖನಗಳು’ (ಸಂಗತ ಡಿ.15, ಕೆ.ಆರ್. ಬಸವರಾಜ) ಲೇಖನಕ್ಕೆ ಪ್ರತಿಕ್ರಿಯೆ: ಲೇಖಕರು ಎರಡು ಆಕ್ಷೇಪಗಳನ್ನು ಎತ್ತಿ ಒಂದು ಆಸರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
‘ನಾಗರಿಕ ಮನುಷ್ಯಕುಲದ ಚರಿತ್ರೆ ಆರಂಭವಾಗುವುದು ಪಶುಪಾಲಕರಾದ ಹಟ್ಟಿಕಾರರಿಂದ’ ಎಂಬ ಶಂ.ಬಾ.ಜೋಶಿಯವರ ನುಡಿ ಇಲ್ಲಿ ಹೆಚ್ಚು ಪ್ರಸ್ತುತ. ಹಟ್ಟಿಕಾರರ (ಪಶುಪಾಲಕ - ಪಟ್ಟಿಕಾರ) ಪ್ರಾಚೀನತೆಗೆ ಪ್ರಾಚೀನ ಹಬ್ಬ, ಪ್ರಥಮ ಬೆಳೆಗಳಾದ ಹಟ್ಟಿಹಬ್ಬ (ದೀಪಾವಳಿ) ಮತ್ತು ಹತ್ತಿ (ಹಟ್ಟಿಕಾರರ ಬೆಳೆ) ಬೆಳೆಗಳು ಸಾಕ್ಷಿಯಾಗಿ ಉಳಿದಿವೆ. ಇಂತಹ ಹಟ್ಟಿಕಾರರ (ವಿಶಾಲ ಹಾಲುಮತ) ಸಮುದಾಯದಿಂದ ಹೊರ ಹರಿವು ಪಡೆದು ಜನ್ಮ ತಳೆದ ಗೊಲ್ಲ, ಗೋವುಳ, ಈಡಿಗ, ಒಕ್ಕಲಿಗ, ನಾಡವ, ಬೇಡ, ಭಟ್ಟಿ, ಜೇಡ, ರಜಪೂತ ಇತ್ಯಾದಿ ಅಸಂಖ್ಯ ಜಾತಿ ಜನಾಂಗವನ್ನು ತಜ್ಞರು ಗುರುತಿಸಿದ್ದಾರೆ. ಪಶುಪಾಲಕರ ಮೂಲ ಸಂಪ್ರದಾಯ, ಆಚರಣೆ ಮತ್ತು ನಂಬಿಕೆಗಳನ್ನು ಉಳಿಸಿಕೊಂಡು ‘ಹಾಲುಮತ’ ಎಂದು ಕರೆಸಿಕೊಳ್ಳುತ್ತಿರುವ ಪ್ರಸ್ತುತ ಕುರುಬ ಜನಾಂಗ ಅದರ ಒಂದು ಘಟಕ ಮಾತ್ರ.
ಮೊದಲನೆಯ ಆಕ್ಷೇಪ, ಬಸವರಾಜ ಅವರು ‘ಒಂದು ಜಾತಿಗೆ ಸೇರಿದ ವ್ಯಕ್ತಿಗಳು ಒಬ್ಬ ಪೂಜನೀಯ ವ್ಯಕ್ತಿಯ ಪೂಜೆಯನ್ನು ಕೈಗೊಂಡರೆ ಮತ್ತು ಆ ಜನಾಂಗ ಅವನನ್ನು ಆರಾಧಿಸಿದರೆ ಪೂಜನೀಯ ವ್ಯಕ್ತಿ ಆ ಜಾತಿಗೆ ಸೇರಲಾರ’ ಎಂಬ ತೆಳುವಾದವನ್ನು ಕೇವಲ ಒಂದು ದೇವಸ್ಥಾನದ ಉದಾಹರಣೆ ಕೊಟ್ಟು ಹೇಳುತ್ತಾರೆ. ಮಹಾರಾಷ್ಟ್ರ, ಉತ್ತರ, ಮಧ್ಯ ಮತ್ತು ದಕ್ಷಿಣ ಕರ್ನಾಟಕದ ನೂರಾರು ರೇವಣಸಿದ್ಧರ, ಸಿದ್ಧರಾಮರ ದೇವಸ್ಥಾನಗಳಲ್ಲಿ ನಡೆಯುವ ಪೂಜೆ, ಆಚರಣೆಗಳನ್ನು ಇವರು ಗಮನಿಸಬೇಕಾಗಿದೆ. ಮಧ್ಯ ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗಳಲ್ಲಿರುವ ರೇವಣಸಿದ್ಧ ಮತ್ತು ಸಿದ್ಧರಾಮರ ಮಠಗಳ ಆಶ್ರಯದಲ್ಲಿ ನಡೆಯುವ ಬೀರದೇವರ ‘ದಳವಾಯಿ (ಕುರುಬ ಜನಾಂಗದ ಜೀವಂತ ಬೀರದೇವರು) ಸಂಪ್ರದಾಯ’ ಮತ್ತು ಕಡೂರು ತಾಲೂಕಿನ ಖಂಡುಗದಹಳ್ಳಿ ಸುತ್ತಮುತ್ತಲಿನ ನಲವತ್ತು ಗ್ರಾಮಗಳಲ್ಲಿ ಇಂದಿಗೂ ಆಚರಣೆಯಲ್ಲಿರುವ ‘ಭಿಂಗಯ್ಯ (ಕುರುಬ ಜನಾಂಗದ ಜೀವಂತ ಗುರು ಸೋಮೇಶ್ವರ) ಸಂಪ್ರದಾಯಗಳು ಸುಮಾರು ಎಂಟು ನೂರು ವರ್ಷಗಳ ಹಿಂದೆ ರೇವಣಸಿದ್ಧ ಮತ್ತು ಸಿದ್ಧರಾಮರು ಹುಟ್ಟು ಹಾಕಿದ ಆಚರಣೆಗಳಾಗಿವೆ. ಇವು ಕುರುಬ ಜನಾಂಗ ಮತ್ತು ಸಿದ್ಧರೇವಣ, ಸಿದ್ಧರಾಮರ ಧಾರ್ಮಿಕ ಕರುಳ ಬಳ್ಳಿಯ ಸಂಬಂಧಗಳ ದ್ಯೋತಕವೆನ್ನಬಹುದು.
ಎಲ್ಲ ಜಾತಿಯವರು ಈ ಪುಣ್ಯಪುರುಷರನ್ನು ಪೂಜಿಸುತ್ತಿರಬಹುದು. ಆದರೆ ತಾವೇ ಸೂಚಿಸಿದ ಜಾತಿಗಳು ವಿಶಾಲ ಹಾಲುಮತದ ವ್ಯಾಪ್ತಿಯಲ್ಲಿ ಬರುವುವೆಂದು ಇವರೇಕೆ ಗಮನಿಸುವುದಿಲ್ಲ? ಜಾತಿಯನ್ನು ಇಂದಿನ ಸಂಕುಚಿತ ದೃಷ್ಟಿಯಿಂದ ನೋಡದೆ, ಪ್ರಸ್ತುತ ವೃತ್ತಿ ಆಧಾರಿತ ಜಾತಿ ನಿರ್ಮಾಣದ ಮೂಲ ನೆಲೆ ಹಟ್ಟಿಕಾರರು-ಪಶುಪಾಲಕರು-ಹಾಲುಮತಸ್ಥರು ಎಂಬ ಸಿದ್ಧಾಂತವು ಪ್ರತಿ ಸಂಶೋಧನೆಯ ಸತ್ಯ ದರ್ಶನವೆಂಬುದನ್ನು ಕಲಬುರ್ಗಿಯವರನ್ನು ಟೀಕಿಸುವವರು ಅರ್ಥ ಮಾಡಿಕೊಳ್ಳಲಿ. ಎರಡನೆಯದಾಗಿ, ರೇವಣಸಿದ್ಧನು ಕುರುಬ ಜನಾಂಗ ಮೂಲದವನು ಎಂದು ಮಹಾರಾಷ್ಟ್ರದ ಪ್ರಸಿದ್ಧ ವಿದ್ವಾಂಸರಾದ ಡಾ. ರಾಮಚಂದ್ರ ಚಿಂತಾಮಣಿ ಡೇರೆ ಅವರು ‘ರೇವಣಸಿದ್ಧರ ಸ್ಥಾನ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ‘ಅಪ್ಪಾಚಿವಾಡಿ’. ಇವನು ದುಗ್ಧ ಸಂಪ್ರದಾಯದ ಧನಗಾರ(ಕುರುಬ) ಮೂಲದ ಪೂಜನೀಯ ವ್ಯಕ್ತಿ’ ಎಂದು ಪ್ರತಿಪಾದಿಸಿದ್ದಾರೆ (ಡಾ. ರಾ. ಚಿ. ಢೇರೆ, ಮಲ್ಲಿಕಾರ್ಜುನ ಮತ್ತು ಮಹಾರಾಷ್ಟ್ರ).
ಎರಡನೆಯ ಆಕ್ಷೇಪ, ‘ಕುರುಬರ ಪರಿಷ್ಕೃತ ರೂಪ ಕುಡು ಒಕ್ಕಲಿಗರು (ಲಿಂಗಾಯತದ ಒಂದು ಪಂಗಡ)’ ಎಂಬ ಎಂ.ಎಂ. ಕಲಬುರ್ಗಿ ಅವರ ವಾದವನ್ನು ಲೇಖಕರು ಪೂರ್ವಗ್ರಹ ಪೀಡಿತರಾಗಿ ಟೀಕಿಸುತ್ತಾರೆ. ‘ಯಾವುದೇ ಜನಾಂಗದ ಮೂಲ ಆ ಜನಾಂಗದ ದೈವಗಳು, ಗುರು ಪರಂಪರೆ ಮತ್ತು ಧಾರ್ಮಿಕ ಆಚರಣೆಗಳಿಂದ ಹೊರಹೊಮ್ಮುತ್ತದೆ.’ ಇವರೊಮ್ಮೆ ಇವೆರಡೂ ಜನಾಂಗಗಳ ದೈವ, ಪರಂಪರೆ ಮತ್ತು ಆಚರಣೆಗಳತ್ತ ದೃಷ್ಟಿಹರಿಸಲಿ. ಕುರುಬರ ಬೀರಪ್ಪ, ಗುಡ್ಡದ ಮಲ್ಲಯ್ಯ, ಮೈಲಾರ ದೈವಗಳು ಲಿಂಗವಂತರಲ್ಲಿ ವೀರಭದ್ರ, ವಿರೂಪಾಕ್ಷ, ಮಲ್ಲಿಕಾರ್ಜುನರಾಗಿದ್ದಾರೆ. ಕುರುಬರ ದೈವೀಪುರುಷರಾದ ದಳವಾಯಿ, ಈರಗಾರರು ಲಿಂಗವಂತರಲ್ಲಿ ಪುರವಂತರಾಗಿದ್ದಾರೆ. ಕುರುಬರ ಕುಲಗುರುಗಳು (ಇವರನ್ನು ರೇವಣಸಿದ್ಧರು ಹುಟ್ಟುಹಾಕಿದ್ದಾರೆ) ಒಡೆಯರು. ಲಿಂಗವಂತರಲ್ಲಿ ಜಂಗಮರಾಗಿ (ಐನೋರು) ಪರಿಷ್ಕೃತಗೊಂಡಿದ್ದಾರೆ. ಹಾಲುಮತ ಕುರುಬರ ಕುಲದೈವ ಬೀರಪ್ಪ ಮುಳ್ಳು ಗದ್ದುಗೆಯೇರಿ ಅಗಿ ಹಾಯುವ ಆಚರಣೆಯು ಇಂದು ಲಿಂಗವಂತರಲ್ಲಿ ಗುಗ್ಗುಳಾಚರಣೆಯಾಗಿ ಪರಿವರ್ತನೆಗೊಂಡಿದೆ.
ಹೀಗೆ ಅನೇಕ ಅಚರಣೆಗಳನ್ನು ಲಿಂಗವಂತವು ಸ್ವೀಕರಿಸಿದೆ. ಲಿಂಗವಂತವು ಧಾರ್ಮಿಕ ದೇಹ ರಚನೆ ಪಡೆದು ‘ವೀರಶೈವ’ ಆದ ತಕ್ಷಣ ಮೂಲವು ಮರೆಯಾಗುವುದಿಲ್ಲ. ಇವೆಲ್ಲ ಮೂಲ ಆಕರಗಳ ಅಧ್ಯಯನ ನಡೆಸಿ ಡಾ.ಎಂ.ಎಂ. ಕಲಬುರ್ಗಿಯವರು ಮೇಲಿನ ನಿರ್ಣಯಕ್ಕೆ ಬಂದಿರುತ್ತಾರೆ. ಒಂದರ್ಥದಲ್ಲಿ ಕೇವಲ ಕುಡು ಒಕ್ಕಲಿಗರಲ್ಲ. ಲಿಂಗವಂತರ ಪ್ರಮುಖ ಪಂಗಡಗಳಾದ ನೊಣಬ (ಕುರುಬರಲ್ಲಿ ನೊಳಂಬ ಕುಲ), ಸಾದ (ಕುರುಬರಲ್ಲಿ ಸಾದ ಕುಲ), ಕುಡು ಒಕ್ಕಲಿಗ ಮತ್ತು ರಡ್ಡಿ (ಕುರುಬರಲ್ಲಿ ರಟ್ಟ ಕುಲ) ಇವರೆಲ್ಲ ಕುರುಬದ ಪರಿಷ್ಕೃತ ರೂಪಗಳು ಎಂಬುದೂ ಗುಟ್ಟಾಗಿ ಉಳಿದಿಲ್ಲ. ಈ ಪ್ರಕ್ರಿಯೆಯನ್ನು ಎರಡು ಜನಾಂಗಗಳ ಸಂಕರಶೀಲತೆ ಎಂದೂ ದಾಖಲಿಸಬಹುದು ಅಲ್ಲವೇ?
ಲೇಖಕರು ತಮ್ಮ ಆಸರೆಗಾಗಿ ಜಿ. ವೆಂಕಟಸುಬ್ಬಯ್ಯನವರ ಮಾತುಗಳನ್ನು ಎಳೆದು ತಂದಿದ್ದಾರೆ. ವೆಂಕಟಸುಬ್ಬಯ್ಯನವರ ಹೇಳಿಕೆ ಶೃದ್ಧಾವಂತ ಸಂಶೋಧಕನ ದೃಢತೆ, ಆತ್ಮವಿಶ್ವಾಸ ಕುರಿತ ಮೆಚ್ಚುಗೆಯಾಗಿದೆ. ಇದನ್ನು ಬಸವರಾಜರು ತಮ್ಮ ಮೂಗಿನ ನೇರಕ್ಕೆ ತಿರುಚಿ ಅರ್ಥೈಸಿರುವುದು ಅಪಾರ್ಥವೆನ್ನಬಹುದು.ಕಲಬುರ್ಗಿ ಅವರನ್ನು ಇಡಿಯಾಗಿ ಓದದೆ ಬಿಡಿಬಿಡಿಯಾಗಿ ಓದಿದವರ ಸ್ಥಿತಿ ಇದು.

Wednesday, January 21, 2015
Monday, January 12, 2015
ದೇವನೂರ ಮಹಾದೇವ ಅವರ ಬದುಕು-ಬರಹದ ಕುರಿತು ಕಿರು ಪರಿಚಯ_ Devanuru Mahadeva_ Malathesh Urs
ದೇವನೂರ ಮಹಾದೇವ ಅವರ ಬದುಕು-ಬರಹದ ಕುರಿತು ಕಿರು ಪರಿಚಯ ಹಾಗೂ ಮುಖ್ಯ ಘಟ್ಟಗಳ ದಾಖಲೀಕರಣ ಈ ಹೆಜ್ಜೆಗುರುತು.
ಮೈಲಿಗಲ್ಲುಗಳು
ಹುಟ್ಟಿದ್ದು-1948ರ ಏಪ್ರಿಲ್ ತಿಂಗಳಿನ ಒಂದು ಸೋಮವಾರ, [ಶಾಲಾ ದಾಖಲಾತಿ 10 ಜೂನ್ 1948] ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ದೇವನೂರು ಗ್ರಾಮದಲ್ಲಿ.
ಹೆತ್ತವರು-ನಂಜಮ್ಮ ಮತ್ತು ನಂಜಯ್ಯ
ಕುಟುಂಬ- ಪತ್ನಿ ಸುಮಿತ್ರಾಬಾಯಿ
ಹಿರಿಯ ಮಗಳು ಉಜ್ವಲ, ಅಳಿಯ ವೆಂಕಟೇಶ್, ಮೊಮ್ಮಗ ಅರವಿಂದ
ಕಿರಿಯ ಮಗಳು ಮಿತಾ, ಅಳಿಯ ಅವಿನಾಶ್, ಮೊಮ್ಮಗಳು ರುಹಾನಿ
ಸಮುದಾಯದೊಂದಿಗೆ-ಕಳೆದ ನಾಲ್ಕು ದಶಕಗಳಿಂದ ಕರ್ನಾಟಕ ಸಮಾಜವಾದಿ ಚಳವಳಿಯಲ್ಲಿ,
ಮೂರು ದಶಕಗಳಿಂದ ದಲಿತ ಚಳವಳಿಯಲ್ಲಿ ತೊಡಗಿಕೊಂಡಿದ್ದಾರೆ.
ರಾಜ್ಯದ ರೈತಸಂಘ ಮತ್ತು ಕೆಲ ದಲಿತ ಸಂಘಟನೆಗಳೊಡಗೂಡಿ
2005ರಲ್ಲಿ ಹುಟ್ಟಿಕೊಂಡ ಪರ್ಯಾಯ ರಾಜಕಾರಣದ ಪ್ರಯೋಗವಾದ
ರಾಜಕೀಯ ಪಕ್ಷ ಸರ್ವೋದಯ ಕರ್ನಾಟಕದ ಅಧ್ಯಕ್ಷರಾಗಿದ್ದಾರೆ.
ಮೊದಲಕತೆ “ಕತ್ತಲ ತಿರುವು” ಕನ್ನಡಪ್ರಭದಲ್ಲಿ ಪ್ರಕಟವಾಗಿದ್ದು-1967
ಕನ್ನಡ ಎಂ.ಎ-1973
ದ್ಯಾವನೂರು-1973
ಸಿಐಐಎಲ್‌ನಲ್ಲಿ ಕೆಲಸ-1975
ಒಡಲಾಳ-1979
ಕುಸುಮಬಾಲೆ-1984
ಕೆಲಸಕ್ಕೆ ರಾಜೀನಾಮೆ ನೀಡಿ ಪೂರ್ಣಪ್ರಮಾಣದಲ್ಲಿ ಸಹಜ ಕೃಷಿಯಲ್ಲಿ ತೊಡಗಿದ್ದು -1989
ಕೃಷಿ ಭೂಮಿ-ಬನವಾಸಿ
ಸಮಗ್ರ ಕೃತಿ ಪ್ರಕಟಣೆ-1992 [ಲಂಕೇಶ್ ಪ್ರಕಾಶನ]
ಮಹಾದೇವರ ಸಾಹಿತ್ಯ ಕುರಿತು ಅಭಿನವ ವಿಶೇಷ ಸಂಚಿಕೆ-ಯಾರ ಜಪ್ತಿಗೂ ಸಿಗದ ನವಿಲುಗಳು-1999 [ಪರಿಷ್ಕೃತ ಮುದ್ರಣ 2013]
ಎದೆಗೆ ಬಿದ್ದ ಅಕ್ಷರ-2012 [ಇದುವರೆಗೆ 12 ಮುದ್ರಣ ಕಂಡಿದೆ]

ಪ್ರಶಸ್ತಿ-ಗೌರವಗಳು
ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ ನಿರಾಕರಣೆ-2012
ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ನಿರಾಕರಣೆ-2014
ಅಂಬೇಡ್ಕರ್ ಜನ್ಮ ದಿನಾಚರಣೆಯ ಅಂಗವಾಗಿ ಪ್ರಜಾವಾಣಿ ರೂಪಿಸಿದ ವಿಶೇಷ ಸಂಚಿಕೆ ಸಂಪಾದಕರಾಗಿ -14.4.2012
ಅವಧಿ ವೆಬ್ ವತಿಯಿಂದ ಮಹಾದೇವರ ಕುರಿತ ವಿಶೇಷ ಸಂಚಿಕೆ-11.12.2012
ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಸಾಹಿತ್ಯ ಸಾಧನೆಗಾಗಿ-2011
ಒಡಲಾಳಕ್ಕೆ ಕೊಲ್ಕತ್ತ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ-1984
ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್-2013
ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ-2012
ಕರ್ನಾಟಕ ರಾಜ್ಯ ಅಂಬೇಡ್ಕರ್ ಪ್ರಶಸ್ತಿ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನಿರಾಕರಣೆ -1984
ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ-1984
ಕುಸುಮಬಾಲೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-1990 [ಈ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಕನ್ನಡಿಗ]
ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ-1995
ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ವಿ.ಎಮ್.ಇನಾಂದಾರ್ ಪ್ರಶಸ್ತಿ-2013
ಅಲ್ಲಮಪ್ರಭುವಿನ ಹೆಸರಿನಲ್ಲಿ ನೀಡುವ ದಾವಣಗೆರೆಯ ಶಿವಯೋಗಾಶ್ರಮ ವಿರಕ್ತಮಠದ ಶೂನ್ಯಪೀಠ ಪ್ರಶಸ್ತಿ-2012
ಬೆಂಗಳೂರು ಸ್ಪೂರ್ತಿಧಾಮದ ಬೋಧಿವೃಕ್ಷ ಪ್ರಶಸ್ತಿ-2013
ಅಮೇರಿಕಾದ ಅಯೋವಾದಲ್ಲಿ ಅಂತರಾಷ್ಟ್ರೀಯ ಬರಹಗಾರರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು-1989

ಅನುವಾದಗಳು
ಕುಸುಮಬಾಲೆ-ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯಕ್ಕಾಗಿ ಇಂಗ್ಲಿಷ್‌ಗೆ ಸೂಸಾನ್
ಡೇನಿಯಲ್ ಅವರಿಂದ ತರ್ಜುಮೆಗೊಂಡು ಮುದ್ರಣ ಹಂತದಲ್ಲಿದೆ.
ಮರಾಠಿಗೆ ರಾಜ್ಯಶ್ರೀ ಜೋಷಿಯವರಿಂದ,
ಬೆಂಗಾಲಿಗೆ ಮೀರಾ ಚಕ್ರವರ್ತಿಯವರಿಂದ,
ಮಲೆಯಾಳಿಗೆ ಸಿ.ಕಮಲಾದೇವಿಯವರಿಂದ ತರ್ಜುಮೆಗೊಂಡಿದೆ.
ಒಡಲಾಳ ಮತ್ತು ಕೆಲ ಸಣ್ಣ ಕಥೆಗಳು-
ಇಂಗ್ಲಿಷ್‌ಗೆ ಎ.ಕೆ.ರಾಮಾನುಜನ್ ಮತ್ತು ಮನುಶೆಟ್ಟಿ
ಒಡಲಾಳ ತೆಲುಗಿಗೆ ವೆಂಕಟಸುಬ್ಬಯ್ಯ
ಒಡಲಾಳ ತಮಿಳಿಗೆ ಪವನನ್- ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಣೆ

Subscribe to:
Posts (Atom)