ಬಲಶಾಲಿಗಳಾದ ಆನೆಗಳಿಗೂ ಒಂದೊಂದು ಭಾಷೆ ಇದೆ. ಮನುಷ್ಯ ಹಿಡಿಯುವ ಅಂಕುಶಕ್ಕೆ ಅವು ತಲೆ ಬಾಗುತ್ತವೆ. ಮಾವುತರು ನೀಡುವ ಆದೇಶಗಳನ್ನು ಶಿರಬಾಗಿ ಪಾಲಿಸುತ್ತವೆ. ಬೆಂಗಾಲಿ, ಉರ್ದು, ಪರ್ಷಿಯನ್ ಸೇರಿದಂತೆ ಹಲವು ಭಾಷೆಗಳಲ್ಲಿ ಮಾವುತರು ನೀಡುವ ಕಟ್ಟು ನಿಟ್ಟಿನ ಆದೇಶಗಳಿಗೆ ಆನೆಗಳು ಎಸ್ ಎನ್ನುತ್ತವೆ. ಆನೆಗಳ ಭಾಷೆಗಳು ಹಾಗೂ ಅವು ಅನುಸರಿಸುವ ಆದೇಶಗಳ ಬಗ್ಗೆ ಕುತೂಹಲ.
ಕಾಡಿನಲ್ಲಿ ರಾಜನಂತೆ ಮೆರೆಯುವ ಆನೆಗಳನ್ನು ಪಳಗಿಸುವುದು ಅಂದ್ರೆ ಅದು ಸಾಹಸದ ಕೆಲಸವೇ ಸರಿ. ಅದರಲ್ಲೂ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಗಜಪಡೆಯನಂತೂ ಚೆನ್ನಾಗಿ ಪಳಗಿಸಿರುತ್ತಾರೆ. ತಮ್ಮನ್ನು ಪೋಷಣೆ ಮಾಡುವ ಮಾವುತರು ಹಾಗೂ ಕಾವಾಡಿಗಳು ಹೇಳಿದಂತೆ ಆನೆಗಳು ಕೇಳುತ್ತವೆ. ಆನೆಗಳಿಗೆ ಮಾವುತುರ ಹೇಳಿಕೊಡುವ ಭಾಷೆ ಬಹಳ ವಿಶಿಷ್ಟವಾಗಿರುತ್ತದೆ. ಬೆಂಗಾಲಿ, ಉರ್ದು, ಪರ್ಷಿಯನ್ ಸೇರಿದಂತೆ ಹಲವು ಭಾಷೆಗಳ ಬಗ್ಗೆ ಆನೆಗಳಿಗೆ ಪರಿಚಯವಿರುತ್ತವೆ.
ತೋಲ್ ಅಂದ್ರೆ ಕಾಲನ್ನು ಮೇಲೆತ್ತುತ್ತವೆ, ಸರಕ್ ಸರಕ್ ಅಂದ್ರೆ ಹಿಂದೆ ಹೋಗುತ್ತವೆ, ವುತ್ ಮತ್ ಅಂದ್ರೆ ಮುಂದೆ ಹೆಜ್ಜೆ ಹಾಕುತ್ತವೆ, ಜುಕ್ ಜುಕ್ ಅಂದ್ರೆ ಕತ್ತು ಮುಂದೆ ಬಗ್ಗಿಸುತ್ತದೆ. ಹೀಗೆ ಮಾವುತರು ನೀಡುವ ಆದೇಶಗಳನ್ನು ಆನೆಗಳು ಕಟ್ಟು ನಿಟ್ಟಾಗಿ ಪಾಲಿಸುತ್ತವೆ. ಚಿನ್ನದ ಅಂಬಾರಿ ಹೊರುವ ಅರ್ಜುನ ಪುಂಡಾಟಿಕೆ ಆನೆಗಳನ್ನು ಪಳಗಿಸುವುದರಲ್ಲಿ ನಿಸ್ಸಿಮ. ಅರ್ಜುನ, ಅಭಿಮನ್ಯು, ಶ್ರೀರಾಮ ಸೇರಿದಂತೆ ಒಟ್ಟು 14 ಆನೆಗಳು ದಸರಾದಲ್ಲಿ ಭಾಗವಹಿಸಿದ್ದು, ಮಾವುತರ ಸಿಗ್ನಲ್ ಗಳನ್ನು ಪಾಲಿಸುತ್ತವೆ.
ಅತ್ಯಂತ ಬಲಶಾಲಿಯಾದ ಆನೆಗಳು ಮನುಷ್ಯ ಹಿಡಿಯುವ ಅಂಕುಶಕ್ಕೆ ಹೆದರುತ್ತವೆ. ದಪ್ ಪದ್ ಅಂದ್ರೆ ಹಗ್ಗವನ್ನು ಭದ್ರವಾಗಿ ಹಿಡಿದೊಳ್ಳುತ್ತವೆ. ತೀರೆ ತೀರೆ ಅಂದ್ರೆ ಮಲಗಿಕೊಳ್ಳುತ್ತವೆ, ಹದಿ ಹದಿ ಅಂದ್ರೆ ಹಿಂದಿನ ಕಾಲೆತ್ತುತ್ತವೆ. ದಲೆ ದಲೆ ಅಂದ್ರೆ ನಮಸ್ಕಾರ ಹಾಕುತ್ತವೆ. ಹೀಗೆ ಮಾವುತರು ಹಾಗೂ ಕಾವಾಡಿಗಳು ಹೇಳಿದಂತೆ ಬಲಶಾಲಿ ಆನೆಗಳು ಕೇಳುತ್ತವೆ. ಮಾವುತರು ಹೇಳಿದಂತೆ ಕೇಳುವ ಆನೆಗಳ ವರ್ತನೆ ನೋಡುವದೇ ಬಹಳ ವಿಶಿಷ್ವವಾಗಿತ್ತದೆ.
ಕಾಡಂಚಿನ ಗ್ರಾಮಗಳಲ್ಲಿ ಪುಂಟಾಟೆಕೆ ಮಾಡುವ ಆನೆಗಳನ್ನು ಹಿಡಿದು ಅವುಗಳನ್ನು ಪಳಗಿಸುತ್ತಾರೆ. ಅಂಕುಶ ಬಳಸಿ ತಾವು ಹೇಳಿದಂತೆ ಆನೆಗಳನ್ನು ಕೇಳಿಸುತ್ತಾರೆ. ಸೆರೆ ಹಿಡಿದ ನಂತರ ಪಳಗಿಸಲು ಕನಿಷ್ಠ ಒಂದು ವರ್ಷವಾದರೂ ಬೇಕಾಗುತ್ತದೆ. ಅವು ಚೆನ್ನಾಗಿ ಪಳಗಿದ ಮೇಲೆ ಜನ ಸಂದಣಿ ಹೆಚ್ಚಾಗಿರುವ ಪ್ರದೇಶದಲ್ಲಿ ಓಡಾಡಿಸಿ ನಾಡಿನ ಪರಿಚಯ ಮಾಡಿಕೊಡಲಾಗುತ್ತದೆ. ನಂತರ ಸೌಮ್ಯ ಸ್ವಭಾವಕ್ಕೆ ಬಂದ ನಂತರ ಆ ಆನೆಗಳನ್ನು ದಸರಾ ಹಬ್ಬಕ್ಕೆ ಕರೆ ತರಲಾಗುತ್ತದೆ.
No comments:
Post a Comment