ಮಾಲತೇಶ್ ಅರಸ್ ಹರ್ತಿಮಠ
ಮಾಲತೇಶ್ ಅರಸ್ ಚಿತ್ರದುರ್ಗ ಜಿಲ್ಲೆಯ ಹರ್ತಿಕೋಟೆ ಗ್ರಾಮದವರು. ಹರ್ತಿಕೋಟೆಯ ಶ್ರೀ ರೇವಣಸಿದ್ದೇಶ್ವರ ಮಹಾ ಸಂಸ್ಥಾನ ಹರ್ತಿಮಠದವರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್, ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಯಣ್ಣ, ಜನಪರ ಹೋರಾಟಗಾರ ಮುರುಘರಾಜೇಂದ್ರ ಒಡೆಯರ್, ಚಿತ್ರದುರ್ಗ ಜಿಲ್ಲಾ ರೈತ ಸಂಘದ ಅಧ್ಯಕ್ಷ ಶಂಕರಪ್ಪ ಅವರ ಗರಡಿಯಲ್ಲಿ ಬೆಳೆದ ಹಳ್ಳಿ ಹುಡುಗ, ಕನ್ನಡಪರ ಹೋರಾಟಗಳಲ್ಲಿ ಚಳವಳಿಗಳಲ್ಲಿ ಬೆಳೆದ ಯುವಕ.
1999ರಿಂದ ಪತ್ರಿಕೋದ್ಯಮದಲ್ಲಿ ತೊಡಗಿದ್ದು, ವಿಜಯ ಕರ್ನಾಟಕ, ಸೂರ್ಯೋದಯ, ಸುವರ್ಣ ನ್ಯೂಸ್, ಸಮಯ ನ್ಯೂಸ್‌ನಲ್ಲಿ ವೃತ್ತಿ ನಿರ್ವಹಿಸಿ ಪ್ರಸ್ತುತ ಬೆಂಗಳೂರಿನಲ್ಲಿ ವಿಜಯವಾಣಿ ಹಿರಿಯ ಉಪ ಸಂಪಾದಕ. ಚಿತ್ರದುರ್ಗದ ಮುರುಘಾ ಮಠದ ಎಸ್‌ಜೆಎಂ ಕಾಲೇಜಿನಲ್ಲಿ ಬಿ.ಎ., ಮೈಸೂರು ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂ.ಎ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ.ಎ.ರಾಜ್ಯಶಾಸ್ತ್ರ, ಬಿ.ಎಡ್, ಎಲ್.ಎಲ್‌ಬಿ., ಡಿಪ್ಲೋಮೋ ಕನ್ನಡ ಅಧ್ಯಯನ.
ಓದುವ ದಿನಗಳಿಂದಲೇ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ಸಾಹಿತ್ಯ ಕೃಷಿಯಲ್ಲಿ ನಿರತ. ‘ಅಪ್ಪ ಮತ್ತು ನಾನು’ ಕವನ ಸಂಕಲನ, ‘ಹಳ್ಳಿ ಹೈದನ ಹಾಯ್ಕುಗಳು’, ‘ರಿಪೋರ್ಟರ್ ಡೈರಿ’, ‘ಮತ್ತೆ ಬರ‌್ತೀನಿ ಪ್ರೀತಿಯೊಂದಿಗೆ’, ಹೀಗೆ ಹಾಯ್ಕು, ಅನುಭವ ಲೇಖನಗಳ ಕೃತಿ ರಚನೆ.
ಪ್ರಶಸ್ತಿಗಳು :
ರಾಜ್ಯ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ನೀಡುವ ‘ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ’(2007), ‘ಭಾರತ ರಾಷ್ಟ್ರೀಯ ಯುವ ಕ್ಷೇಮಾಭ್ಯುದಯ ಪ್ರತಿಷ್ಠಾನ ನೀಡುವ ರಾಜೀವ್ ಗಾಂಧಿ ರಾಜ್ಯ ಯುವ ಪ್ರಶಸ್ತಿ’(2006), ಚಿತ್ರದುರ್ಗ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (2004), ಕೇಂದ್ರ ಸರ್ಕಾರದ ನೆಹರು ಯುವ ಕೇಂದ್ರ ನೀಡುವ ‘ಜಿಲ್ಲಾ ಅತ್ಯುತ್ತಮ ಯುವ ಪ್ರಶಸ್ತಿ’ (2003), ಕುವೆಂಪು ವಿಶ್ವ ವಿದ್ಯಾನಿಲಯ ನೀಡುವ ರಾಷ್ಟ್ರೀಯ ಸೇವಾ ಯೋಜನಾ ಪ್ರಶಸ್ತಿ (2002), ಚುಟುಕು ಕವಿರತ್ನ ಪ್ರಶಸ್ತಿ (2003)ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನ.
ಹವ್ಯಾಸ, ಆಸಕ್ತದಾಯಕ ಕ್ಷೇತ್ರಗಳು...
ನಿರಂತರ ಅಧ್ಯಯನ, ಕವನ, ಲೇಖನ, ಸೃಜನಶೀಲ ಬರಹ, ಚಿತ್ರಕಲೆ, ಸಂಘಟನೆ, ಸೇವಾ ಮನೋಭಾವ, ಪರಿಸರ ಮತ್ತು ವನ್ಯ ಜೀವಿಗಳ ಸಂರಕ್ಷಣೆ, ಸಸಿ ವಿತರಣೆ ಸೇರಿದಂತೆ ಅನೇಕ ಹವ್ಯಾಸ. ಕಲೆ, ಸಾಹಿತ್ಯ, ಸಂಗೀತ, ರಂಗಭೂಮಿ, ಶಿಕ್ಷಣ, ಕೃಷಿ, ಕ್ರೀಡೆ, ಕನ್ನಡ ನಾಡು ನುಡಿ ರಕ್ಷಣೆಗಾಗಿ ಹೋರಾಟ, ಛಾಯಾಗ್ರಾಹಣ, ಸಾಂಸ್ಕೃತಿಕ ಕಾರ್ಯ, ಯುವಜನ ಕ್ಷೇತ್ರ, ಧಾರ್ಮಿಕ ಸಮಾಜ ಸೇ ೆಆಸಕ್ತದಾಯಕ ಕ್ಷೇತ್ರಗಳಾಗಿವೆ.
ನಿರ್ವಹಿಸಿರುವ ಜವಾಬ್ದಾರಿಗಳು...
ರಾಷ್ಟ್ರಕವಿ ಕುವೆಂಪು ಕನ್ನಡ ಯುವಕ ವಿದ್ಯಾರ್ಥಿ ಸಂಘದ ಮೂಲಕ 1997ರಿಂದ ಸಂಘಟನೆಗಳಲ್ಲಿ ಪದಾರ್ಪಣೆ. ಅಖಿಲ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ(ಎನ್‌ಎಸ್‌ಯುಐ) ಹೊಳಲ್ಕೆರೆ ತಾಲೂಕು ಕಾರ್ಯದರ್ಶಿ ಹಾಗೂ ಅಧ್ಯಕ್ಷನಾಗಿ, ಚಿತ್ರದುರ್ಗ ಜಿಲ್ಲಾ ಹೊಳಲ್ಕೆರೆ ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ಸಂಘಟನಾ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿರಾಗಿ ಸೇವೆ ಸಲ್ಲಿಸಿದ್ದಾರೆ. ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ, ವನ್ಯಜೀವಿ ಮತ್ತು ಪರಿಸರ ಸಂರಕ್ಷಣಾ ವೇದಿಕೆ ಚಿತ್ರದುರ್ಗ ಜಿಲ್ಲಾ ಸಂಚಾಲಕರಾಗಿದ್ದರು. ಕರ್ನಾಟಕ ರಾಜ್ಯ ಯುವಜನ ಒಕ್ಕೂಟದ ಹೊಳಲ್ಕೆರೆ ತಾಲೂಕು ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ, ನೀರಾವರಿ ಹೋರಾಟ ಸಮಿತಿ ಯುವ ಘಟಕದ ಸಂಚಾಲಕರಾಗಿ, ಕರ್ನಾಟಕ ರಕ್ಷಣಾ ವೇದಿಕೆಯ ಚಿತ್ರದುರ್ಗ ಜಿಲ್ಲಾ ಪ್ರಥಮ ಪ್ರಧಾನ ಕಾರ್ಯದರ್ಶಿಯಾಗಿ, ವಂದೇಮಾತರಂ ಗೆಳೆಯರ ಬಳಗದ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಚಿತ್ರದುರ್ಗ ಜಿಲ್ಲಾ ಬಯಲು ಸೀಮೆ ಬರಹಗಾರರ ವೇದಿಕೆ ಅಧ್ಯಕ್ಷರಾಗಿದ್ದಾರೆ. ಬೆಂಗಳೂರಿನಲ್ಲಿ ಪತ್ರಕರ್ತ, ಸಾಹಿತಿ ರಮೇಶ್ ಹಿರೇಜಂಬೂರು ಸಾರಥ್ಯದ ನಿತ್ಯೋತ್ಸವ ಸಾಹಿತ್ಯ ಬಳಗದಲ್ಲಿ ಸಾಹಿತ್ಯ ಸೇವೆ.
ಮಾಧ್ಯಮ ಲೋಕದಲ್ಲಿ:
ನೊಂದವರಿಗೆ ಸಾಂತ್ವನ ಹೇಳಬಲ್ಲ, ಅಶಕ್ತರ ದನಿಯಾಗಬಲ್ಲ, ದಬ್ಬಾಳಿಕೆ, ದೌರ್ಜನ್ಯ, ತಾರತಮ್ಯ ಮತ್ತು ಭ್ರಷ್ಟಾಚಾರದ ವಿರುದ್ಧ ಲೇಖನಿ ಝಳಪಿಸುವ ಎದೆಗಾರಿಕೆಯುಳ್ಳ ಪ್ರಾಮಾಣಿಕ ಪತ್ರಕರ್ತನಾಗಿ ಮಾಧ್ಯಮ ಲೋಕದಲ್ಲಿ ಗುರ್ತಿಸಿಕೊಳ್ಳಬೇಕು. ಸಮಾಜದಲ್ಲಿ ಜವಾಬ್ದಾರಿಯುತ ನಾಗರಿಕನಾಗಬೇಕು. ನಿರ್ಲಕ್ಷಿತ ವ್ಯಕ್ತಿ, ವಿಚಾರಗಳನ್ನು ಮುಖ್ಯವಾಹಿನಿಗೆ ತರಬೇಕೆಂಬ ಹೆಬ್ಬಯಕೆ ಹಾಗೂ ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಗೆ ದಕ್ಕೆಯಾಗದಂತೆ ಕಾಯುವ ಕಾಯಕ.
ಪುರಸ್ಕಾರ ಮತ್ತು ಸನ್ಮಾನಗಳು :
ಸಮಾಜ ಸೇವೆಗಾಗಿ, ಪತ್ರಕರ್ತನಾಗಿ, ಯುವ ಸಾಹಿತಿಯಾಗಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವುದಕ್ಕೆ ರಾಜ್ಯ ಸರ್ಕಾರದ ಪರವಾಗಿ ಯುವ ಜನ ಸೇವಾ ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ಮತ್ತು ಶಿಕ್ಷಣ ಸಚಿವ ಬಸವರಾಜ್ ಹೊರಟ್ಟಿ, ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ ಪ್ರಕಾಶ್, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿ ಪುರಸ್ಕರಿಸಿದ್ದಾರೆ. ಚಿತ್ರದುರ್ಗದ ಜಿಲ್ಲಾಧಿಕಾರಿಗಳಾಗಿದ್ದ ಕೆ. ಅಮರ ನಾರಾಯಣ ಅವರು ಪರಿಸರ ಕಾಳಜಿಗಾಗಿ ಜಿಲ್ಲಾಡಳಿತದ ಪರವಾಗಿ ಸನ್ಮಾನಿಸಿ ಪುರಸ್ಕರಿಸಿದ್ದಾರೆ. ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್, ಮುರುಘಾ ಮಠದ ಡಾ. ಶಿವಮೂರ್ತಿ ಮರುಘಾ ಶರಣರು, ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮೀಜಿ, ಹೊಸದುರ್ಗದ ಕನಕ ಮಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿ, ಬಾಳೆಹೊನ್ನೂರು ಪೀಠದ ರಂಭಾಪುರಿ ಶ್ರೀಗಳು, ಆದಿಚುಂಚನಗಿರಿ ಮಠದ ಜಗದ್ಗುರು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ, ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮೀಜಿ, ದಾವಣಗೆರೆ ಪಂಚಮಸಾಲಿ ಮಠದ ಶ್ರೀ ಸಿದ್ದಲಿಂಗೇಶ್ವರ ಮಹಾಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು ಸನ್ಮಾನಿಸಿ ಗೌರವಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು, ಮಕ್ಕಳ ಸಾಹಿತ್ಯ ವೇದಿಕೆ, ದಾವಣಗೆರೆ ಮಹಾನಗರ ಪಾಲಿಕೆ, ದಾವಣಗೆರೆ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಸಮರ ಸೇನೆ , ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಸನ್ಮಾನಿಸಿ ಗೌರವಿಸಿವೆ.
ವೃತ್ತಿ ಅನುಭವ
ರಾಜ್ಯದ ಪ್ರಮುಖ ರಾಜಕೀಯ ವ್ಯಕ್ತಿಗಳು, ಉದ್ಯಮಿಗಳು, ಚಳುವಳಿಗಾರರು, ಸ್ವಾಮೀಜಿಗಳ ನೇರ ಸಂದರ್ಶನದ ಅನುಭವವನ್ನು ಸುವರ್ಣ ನ್ಯೂಸ್ ಹಾಗೂ ಸಮಯ ನ್ಯೂಸ್ ಬಿತ್ತರಿಸಿದೆ. ಲೋಕಸಭಾ, ವಿಧಾನಸಭಾ, ವಿಧಾನ ಪರಿಷತ್ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ವರದಿ ಮಾಡಿದ ಅನುಭವ. ವಿಜಯವಾಣಿ, ವಿಜಯಕರ್ನಾಟಕ, ಸೂರ್ಯೋದಯ, ಸುಧಾ, ತರಂಗ, ಅಗ್ನಿ ಸೇರಿ ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ ವಿವಿಧ ರಂಗಗಳಿಗೆ ಸಂಬಂಧಿಸಿದ ಪೋಟೋ ಸಹಿತ ಸುಮಾರು 400 ಕ್ಕೂ ಹೆಚ್ಚು ಲೇಖನಗಳು ಪ್ರಕಟ.
ಕೆಲ ವಿಶೇಷ ವರದಿಗಳ ಕಿರು ಚಿತ್ರಣ.
ದಾವಣಗೆರೆಯಲ್ಲಿ ನಕಲಿ ಬೆಣ್ಣೆದೋಸೆ (ತನಿಖಾ ವರದಿ)
ಹೊನ್ನಾಳಿಯಲ್ಲಿ ಬಂಧಿತರಾದ ಬೈಕ್ ಕಳ್ಳರ ಸೋಗಿನ ಉಗ್ರರು (ತನಿಖಾ ವರದಿ)
ಚಿತ್ರದುರ್ಗದ ಅಕ್ರಮ ಅಕ್ಕಿ ಮಾಫಿಯಾ, (ತನಿಖಾ ವರದಿ)
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಮತ್ತು ಹಿರಿಯೂರು ಅಕ್ರಮ ಮರಳು ಮಾಫಿಯಾ (ಸರಣಿ ತನಿಖಾ ವರದಿ)
ಭದ್ರಾ ಮೇಲ್ದಂಡೆ ಹೋರಾಟ (ಸರಣಿ ವರದಿ)
ಹಕ್ಕಿ ಪಿಕ್ಕಿ ಜನಾಂಗದ ಕ್ಷ ಕಿರಣ ವರದಿ.
ಇಂಪ್ಯಾಕ್ಟ್ ಆದ ದಾವಣಗೆರೆ ಮಲ್ಟಿಜಿಮ್ ವರದಿ. (ಕ್ರೀಡಾ ವರದಿ)
ದಾವಣಗೆರೆಯಲ್ಲಿ ಕಳ್ಳ ಸ್ವಾಮೀಜಿ ಬಯಲಿಗೆ (ತನಿಖಾ ವರದಿ)
ಸ್ವಾತಂತ್ರ್ಯೋತ್ಸವದ ವಿಶೇಷ ಅರ್ಧ ತಾಸಿನ ಸ್ಟೋರಿ.
ಕಾರ್ಗಿಲ್ ಯುದ್ದದ ನೆನಪಿನ ವಿಶೇಷ ಅರ್ಧ ತಾಸಿನ ಸ್ಟೋರಿ
ಚಿತ್ರದುರ್ಗದಲ್ಲಿ ನಿಲ್ಲದ ಕಲ್ಲು ಗಣಿಗಾರಿಕೆ. ಪರಿಸರ ನಾಶ (ಸರಣಿ ವರದಿ)
No comments:
Post a Comment