ಹರ್ತಿಕೋಟೆ ಹುಡುಗ
Saturday, January 2, 2016
Friday, October 2, 2015
ಹಾಲುಮತ ಸಮುದಾಯದ ಸಂಘಟನಾ ಕ್ರೀಡೆ ಟಗರುಗಳ ಕಾಳಗ... - ಮಾಲತೇಶ್ ಅರಸ್ ಹರ್ತಿಕೋಟೆ
ಹಾಲುಮತ ಸಮುದಾಯದ ಸಂಘಟನಾ ಕ್ರೀಡೆ
ಟಗರುಗಳ ಕಾಳಗ...
*ಟುರ್.......ಬ್ಯಾ....
- ಮಾಲತೇಶ್ ಅರಸ್ ಹರ್ತಿಕೋಟೆ
ಸುನಾಮಿ, ಬಂಡಿ, ಕಿಂಗ್ ಕೋಬ್ರಾ, ಮೈಲಾರಿ, ರಾಯಣ್ಣ, ಮದಕರಿ, ಪವರ್, ಥಂಡಾರ್, ಘಜನಿ, ವೀರ ಕನ್ನಡಿಗ, ದಾವಣಗೆರೆ ಟೈಗರ್, ದುರ್ಗದ ಹುಲಿ, ಪೈಟರ್ ಭದ್ರಾ, ಲೂಸ್‌ಮಾದ, ಸ್ಪಾಟ್, ಸೆವೆನ್ ಲಯನ್, ಕರಿಯ, ಸಿಡಿಲು ಮರಿ, ಕನಕ, ಕೆಂಗಾ, ಸುಪಾರಿ, ಸಿಂಹದ ಮರಿ, ಸೂಪರ್‌ಟೈಗರ್...
ಅಬ್ಬಬ್ಬಾ... ಇದೇನು ಅಂಥಾ ಶಾಕ್ ಆಯ್ತ ಇವೆಲ್ಲಾ ಹೆಸರುಗಳು ಕಣ್ರೀ. ಜನರ ಹೆಸರಲ್ಲ ,ಬದಲಿಗೆ ಟಗರುಗಳ ಹೆಸರು. ರೇವಣಸಿದ್ದೇಶ್ವರ ಆರಾಧಕರು , ಮೈಲಾರಲಿಂಗೇಶ್ವರ, ಬೀರಲಿಂಗೇಶ್ವರ, ಮಾಳಿಂಗರಾಯ ಸೇರಿ ವಿವಿಧ ದೇವರುಗಳ ಭಕ್ತರಾದ ಕುರುಬರು ಸಾಕಿ ಕಾಳಗಕ್ಕೆ ಬಿಡುವ ಖದರ್ ಟಗರುಗಳ ಹೆಸರುಗಳು. ಇಲ್ಲಿ ಟಗರುಗಳಿಗೆ ಟಗರುಗಳೇ ಸಾಟಿ.
ಕ್ರೀಡೆಗಳು ನಾಡಿನ ಸಿರಿವಂತಿಕೆಗೆ ಸಾಕ್ಷಿ, ಇಲ್ಲಿನ ಪ್ರತಿಯೊಂದು ಆಟಗಳನ್ನು ಜನತೆ ಇಂದಿಗೂ ಪ್ರೀತಿಸುತ್ತಾರೆ. ದೇವರಂತೆ ಕ್ರೀಡೆಯನ್ನು ಆರಾಧಿಸುತ್ತಾರೆ. ಕನ್ನಡ ನಾಡಿನಲ್ಲಿ ಒಂದೊಂದು ಕ್ರೀಡೆಯೂ ಒಂದೊಂದು ಇತಿಹಾಸದ ನೆನಪನ್ನು ಹೊರಹಾಕುತ್ತವೆ.
ರಾಜ ಮಹಾರಾಜರ ಚರಿತ್ರೆಯಲ್ಲೂ ಕ್ರೀಡೆಗಳಿಗೆ ಉನ್ನತ ಮಾನ್ಯತೆ ಇದೆ. ಕರ್ನಾಟಕದಲ್ಲಿರುವ ಹಲವು ಗ್ರಾಮೀಣ ಕ್ರೀಡೆಗಳು ಸಖತ್ ಖುಷಿ ಕೊಡುತ್ತವೆ. ಅಂತೆಯೇ ಕೆಲವು ಕ್ರೀಡೆಗಳು ಜೂಜಾಟವೆಂದೇ ಬಿಂಬಿತವಾದರೂ ಅವು ಅಭಿಮಾನಿಗಳನ್ನು ಹುಚ್ಚೆಬ್ಬಿಸಿ ಕುಣಿಯುವಂತೆ ಮಾಡುತ್ತವೆ. ಅದರಲ್ಲಿ ಪ್ರಾಣಿಗಳ ನಡುವಿನ ಕಾದಾಟ ಅಂದರೆ ಯುದ್ಧದೊಳಗಿನ ಕಾಳಗವನ್ನು ನೆನಪಿಸುತ್ತದೆ. ಇದು ಪ್ರಾಣಿಗಳಿಗೆ ದೈಹಿಕವಾಗಿಯೂ, ಮಾನಸಿಕವಾಗಿಯೂ ಬಲ ಕೊಡುತ್ತದೆ. ಅದೇ ಟಗರು ಕಾಳಗ..
ಈ ಟಗರು ಕಾಳಗ ಹಾಲುಮತ ಸಮುದಾಯದ ಯುವಕರ ಜೀವಾಳ. ಇಲ್ಲಿ ಕುರುಬರು ಕೇವಲ ಕುರಿ ಸಾಕಿ ಜೀವನ ಸಾಗಿಸುವುದಲ್ಲ. ಬದಲಿಗೆ ಗ್ರಾಮೀಣ ಕ್ರೀಡೆಗಳ ಮೂಲಕ ಸಂಘಟನೆಯಲ್ಲಿ ತೊಡಗಿದ್ದಾರೆ.
ಕ್ರಿಕೆಟ್ ಎಂಬ ಮಾಂತ್ರಿಕ ಕ್ರೀಡೆ ಬಂದಾಗಿನಿಂದ ಎಲ್ಲೆಡೆ ಗ್ರಾಮೀಣ ಕ್ರೀಡೆಗಳು ಮೂಲೆಗುಂಪಾಗಿ ನಶಿಸಿಹೋಗುತ್ತಿವೆ. ಕ್ರಿಕೆಟ್ ಇಂದು ಜೂಜಾಟ ಆಡುವ ದೊಡ್ಡ ಆಟವಾಗಿದೆ. ಇಂತಹ ಕ್ರಿಕೆಟ್ ದಾಳಿಯ ನಡುವೆಯೂ ರಾಜ್ಯದ ವಿವಿದೆಡೆ ಅದರಲ್ಲೂ ರಾಷ್ಟ್ರ ಮಟ್ಟದ, ರಾಜ್ಯ ಮಟ್ಟದ ಭಾರಿ ಟಗರಿನ ಕಾಳಗಗಳು ನಡೆಯುತ್ತವೆ.
ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠದ ಕಲಬುರಗಿ ವಿಭಾಗದ ತಿಂಥಿಣಿ ಮಠದ ನೇತೃತ್ವದಲ್ಲಿ ಪ್ರತಿವರ್ಷ ಜನವರಿ 12.13.14 ರಂದು ನಡೆಯುವ ಹಾಲುಮತ ಸಂಸ್ಕೃತಿ ವೈಭವದ ಸಂದರ್ಭದಲ್ಲಿ ರಾಜ್ಯ ಮಟ್ಟದ ಟಗರುಗಳ ನಡೆಯುತ್ತದೆ. ಇದು ನಮ್ಮ ಸಮುದಾಯದ ಸಂಘಟನೆಯನ್ನು ಕ್ರೀಡೋತ್ಸಾಹದ ಮೂಲಕ ಒಂದೆಡೆ ಸೇರಿಸುವ ಪ್ರಯತ್ನವೂ ಹೌದು.
ಕ್ರೀಡಾ ಇತಿಹಾಸ ಇಲ್ಲಿ ಮರೆಯಾಗಿಲ್ಲ. ಇಲ್ಲಿ ಜಿಗಿದು ಕಾಳಗಕ್ಕಿಳಿಯುವ ಟಗರುಗಳ ಬೆಲೆ ಕೇಳಿದರೆ ನೀವು ತಣ್ಣಗಾಗುತ್ತೀರಿ ಏಕೆಂದರೆ ಇವುಗಳು 60 ಸಾವಿರದಿಂದ ಒಂದೂವರೆ ಲಕ್ಷದಷ್ಟು ಬೆಲೆಯಿದೆ. ಮಣ್ಣಲ್ಲಿ ಬಿದ್ದು ಕಾಳಗಕ್ಕಿಳಿಯುವ ಕುಸ್ತಿ ಪೈಲ್ವಾನರಿಗಿಂತ ನಾವೇನೂ ಕಮ್ಮಿ ಇಲ್ಲವೆಂಬಂತೆ ಟಗರುಗಳೂ ಕಾದಾಟಕ್ಕಿಳಿಯುತ್ತವೆ.
ಈ ಕುರಿ ಕಾಳಗವನ್ನು ನೋಡಲು ಮಕ್ಕಳು, ಯುವಕರು, ವಯಸ್ಕರು ಸಾವಿರಾರು ಸಂಖ್ಯೆಯಲ್ಲಿ ಸಾಲು ಸಾಲು ನಿಂತು ನೋಡಿ ಸಂಭ್ರಮಿಸ್ತಾರೆ. ನಾನು ಕಂಡ ಅಪ್ರತಿಮ ಹೋರಾಟ ಅಂದ್ರೆ ಅದು ದಾವಣಗೆರೆ ಜಿಲ್ಲೆಯಲ್ಲಿ ನಡೆಯುವ ಸ್ಪರ್ಧೆ. ಇಲ್ಲಿ ಕುಸ್ತಿ ಹಾಗೂ ಟಗರಿನ ಕಾಳಗಗಳು ಸಖತ್ತಾಗಿ ವಿಜೃಂಭಣೆಯಿಂದ ನಡೆಯುವ ಆಟಗಳಾಗಿವೆ. ಸಿಡಿದು ಅಬ್ಬರಿಸಿ ಆಕ್ರೋಶಗೊಂಡು ಕಾಳಗದಲ್ಲಿರುವ ಟಗರುಗಳ ಹೆಸರುಗಳೂ ಅಷ್ಟೇ ರೋಚಕವಾಗಿರುತ್ತವೆ. ಮೇಲೆ ಹೇಳಿದಂತೆ ಡಿಫರೆಂಟ್ ಡಿಫರೆಂಟ್ ಹೆಸರುಗಳಿವೆ.
ಸಾಕುವ ವಿಧಾನ:
ಇಲ್ಲಿ ಮಾಮೂಲಿ ಕುರಿಗಳಂತೆ ಇವುಗಳನ್ನು ಸಾಕಲಾಗುವುದಿಲ್ಲ. ಬದಲಿಗೆ ಮಕ್ಕಳಂತೆ ನೋಡಿಕೊಳ್ಳಲಾಗುತ್ತದೆ. ಅವುಗಳಿಗೆ ಹಿಂಡಿ, ಬೂಸ, ಹಸಿರು ಮೇವು ಹೀಗೆ ವಿವಿಧ ಬಗೆಯ ಆಹಾರ ನೀಡುವ ಮೂಲಕ ತಾಲೀಮು ಕೊಡಲಾಗುತ್ತದೆ. ಅವುಗಳಿಗೆ ವಿಶೇಷ ಆರೈಕೆ ಮಾಡಲಾಗುತ್ತದೆ. ತಳಿಗಳನ್ನು ಆಯ್ಕೆ ಮಾಡಿಕೊಂಡು ಅವುಗಳಿಗೆ ಸೂಕ್ತ ರೀತಿಯ ಆರೋಗ್ಯ ನೀಡಲಾಗುತ್ತದೆ. ಮುಂಜಾನೆ ಮತ್ತ ಸಂಜೆ ವಾಕ್ ಕರೆದುಕೊಂಡು ಹೋಗುತ್ತಾರೆ.
ಒಟ್ಟಾರೆ ಈ ಕ್ರೀಡೆಯ ದಿನ ಜನ ಜಾತ್ರೆಯೇ ಸೇರುತ್ತದೆ. ಯುವಕರು ಮಕ್ಕಳು ಬಂದು ಜಾತ್ರೆಯಂತೆ ಆಚರಿಸುತ್ತಾರೆ. ಅಲ್ಲದೆ ತಮ್ಮ ಪ್ರೀತಿಯ ಟಗರುಗಳೊಂದಿಗೆ ಬಂದು ಕಾಳಗ ಆಡುತ್ತಾರೆ ಅದಕ್ಕಾಗಿ ಇದು ನೆನಪಿನಂಗಳದಲ್ಲಿ ಉಳಿಯುತ್ತದೆ.
ಬಾಕ್ಸ್ ...
ಗ್ರಾಮೀಣ ಕ್ರೀಡೆಯಾಗಿ ಪರಿಗಣಿಸಲಿ...
ಟಗರು ಕಾಳಗ ತುಂಬ ಮನರಂಜನೆ ನೀಡುತ್ತದೆ. ಸಮುದಾಯದ ಯುವಕರ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಂದಿಗೂ ಕೆಸರುಗದ್ದೆ, ಲಗೋರಿ ಸೇರಿದಂತೆ ಅನೇಕ ಆಟಗಳು ಗ್ರಾಮೀಣ ಕ್ರೀಡೆಗಳಲ್ಲಿವೆ. ಆದರೆ ಈ ಕುರಿ ಹುಂಡಿ ಅಥವಾ ಟಗರು ಕಾಳಗವನ್ನು ಗ್ರಾಮೀಣ ಕ್ರೀಡೆ ಎಂದು ಪರಿಗಣಿಸಿಲ್ಲ ಅದನ್ನು ಸರಕಾರ ಮಾಡಲಿ. ಅಲ್ಲದೆ ಟಗರು ಕಾಳಗ ಸ್ಪರ್ಧೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡಲಿ.
ಶ್ರೀ ಸಿದ್ಧರಾಮಾನಂದಪುರಿ ಸ್ವಾಮೀಜಿ, ಕಾಗಿನೆಲೆ ಕನಕ ಗುರುಪೀಠ ತಿಂಥಿಣಿ
‘‘ ಕುರಿ ಕಾಳಗ ಎನ್ನುವುದು ಪಕ್ಕಾ ಗ್ರಾಮೀಣ ಕ್ರೀಡೆ. ಇದನ್ನು ನಾವು ಸಣ್ಣವರಿಂದ ಅಂದ್ರೆ ಸುಮಾರು 45 ವರ್ಷದಿಂದ ನಾನು ಕುರಿ ಹುಂಡಿಯಲ್ಲಿ ಭಾಗವಹಿಸುತ್ತಿದ್ದೇನೆ. ಇಲ್ಲಿಯ ಟಗರುಗಳ ಕಾದಾಟದ ನೋಟ ಜನತೆಯನ್ನು ಹುಚ್ಚೆಬ್ಬಿಸಿ ಕುಣಿಯುವಂತೆ ಮಾಡುತ್ತವೆ. ಅಲ್ಲದೆ ಇವುಗಳನ್ನು ನಾವು ಮಕ್ಕಳಂತೆ ಸಾಕುತ್ತೇವೆ.’’
ಭೀರಪ್ಪ, ಟಗರು ಮಾಲಿಕ
‘‘ ಕನ್ನಡ ನಾಡಿನಲ್ಲಿ ಮಲೆನಾಡು, ಕರಾವಳಿ, ಬಯಲುಸೀಮೆ. ಅರೆಮಲೆನಾಡು, ಪಶ್ಚಿಮ ಘಟ್ಟ ಸೇರಿದಂತೆ ಎಲ್ಲೆಡೆ ವಿವಿಧ ಆಟಗಳಿವೆ ಈ ಕುರಿಕಾಳಗ ಮಾತ್ರ ಕುರುಬರಿಗೆ ಅಚ್ಚುಮೆಚ್ಚು, ಕುಸ್ತಿಯಂತೆ ಇದು ಸಖತ್ ಪವರ್‌ಫುಲ್. ಇದು ಕನಕ ಜಯಂತಿ ಅಥವಾ ಹಾಲುಮತೋತ್ಸವ ಸಂದರ್ಭದಲ್ಲಿ ಎಲ್ಲೆಡೆ ನಡೆಯಬೇಕಿದೆ.’’
ಎಚ್. ಆರ್. ಶಿವರುದ್ರಪ್ಪ, ಮಾಜಿ ಪ್ರಧಾನರು.
ನಿಕಟಪೂರ್ವ ಅಧ್ಯಕ್ಷರು, ಹರ್ತಿಕೋಟೆ ಉಣ್ಣೆ ಕೈ ಮಗ್ಗ ನೇಕಾರರ ಸಹಕಾರ ಸಂಘ

ಗುಳೆ ಎಫೆಕ್ಟ್‌ನಿಂದ ಶಾಲೆಯಲ್ಲಿ ಮಕ್ಕಳ ಕೊರತೆ
ಗುಳೆ ಎಫೆಕ್ಟ್‌ನಿಂದ ಶಾಲೆಯಲ್ಲಿ ಮಕ್ಕಳ ಕೊರತೆ
* ಊರುಗಳೆಲ್ಲಾ ಖಾಲಿ ಖಾಲಿ * ಮನೆಯಲ್ಲಿ ಪಾಲಕರೂ ಇಲ್ಲ ಮಕ್ಕಳೂ ಇಲ್ಲ
ಮಾಲತೇಶ್ ಅರಸ್ ಹರ್ತಿಮಠ
ಗಂಗಾವತಿ ಬ್ಯೂರೋ: ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದ ಭಾಗಗಳ ಹಳ್ಳಿಗಳಲ್ಲಿರುವ ಶಾಲೆಗಳಲ್ಲಿ ಇದೀಗ ಮಕ್ಕಳ ಕೊರತೆ ಎದುಗಾಗಿದೆ. ಶಿಕ್ಷಕರು ಕಡ್ಡಾಯವಾಗಿ ಶಾಲೆಗೆ ಬಂದರೆ, ವಿದ್ಯಾರ್ಥಿಗಳು ಕಡ್ಡಾಯವಾಗಿ ಗೈರು ಹಾಜರಾಗುತ್ತಿದ್ದಾರೆ.
ಹೌದು.. ಮುಂಗಾರು ಮಳೆ ಬಾರದೆ ಕಂಗಾಲಾಗಿರುವ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳ ರೈತರು ಕುಟುಂಬ ಸಮೇತ ಊರುಗಳ ತೊರೆದು ಬೆಂಗಳೂರು, ಮಂಗಳೂರು, ಗೋವಾಗಳತ್ತ ಗುಳೇ ಹೊರಟಿರುವುದು ಶಾಲೆಗಳು ಹಾಗೂ ಊರುಗಳು ಖಾಲಿ ಖಾಲಿಯಾಗಲು ಪ್ರಮುಖ ಕಾರಣ.
ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಯಲ್ಲದೇ ಹಾವೇರಿ, ಗದಗ, ಬಿಜಾಪುರ, ಬೆಳಗಾವಿ, ಕಲಬುರಗಿ, ಯಾದಗಿರಿ ಜಿಲ್ಲೆಯಲ್ಲಿ ಮುಂಗಾರು ಮಳೆ ಕ್ಷೀಣಿಸಿದ್ದರಿಂದ ಬರದ ಛಾಯೆ ಆವರಿಸಿದೆ. ಉದ್ಯೋಗ ಅರಸಿ ಕುಟುಂಬ ಸಮೇತ ಊರು ಬಿಟ್ಟಿರುವುದರಿಂದ ಗ್ರಾಮಗಳೆಲ್ಲಾ ಬಿಕೋ ಎನ್ನುತ್ತಿವೆ.
ಶಾಲೆಯಲ್ಲಿ ಮಕ್ಕಳ ಕೊರತೆ:
ಇಲ್ಲಿ ವ್ಯವಸಾಯ ನಂಬಿದ ಕುಟುಂಬಗಳೇ ಹೆಚ್ಚಾಗಿದ್ದು ಅನಿವಾರ್ಯವಾಗಿ ಮನೆಬಿಟ್ಟು ಕೆಲಸಕ್ಕೆ ಹೊರಟಾಗ ಮಕ್ಕಳನ್ನೂ ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಿದ್ದಾರೆ. ಹೀಗೆ ಶಾಲೆಗೆ ಹೋಗಬೇಕಾದ ಮಕ್ಕಳು ಪಾಲಕರಿಲ್ಲದೆ ಇರಲು ಸಾಧ್ಯವಿಲ್ಲ ಹೀಗಾಗಿ ಶಾಲೆಗೆ ಚಕ್ಕರ್ ಹಾಕುತ್ತಿರುವುದು ಮಾಮಾಲು. ಈ ಬಗ್ಗೆ ಶಾಲೆಗಳ ಮುಖ್ಯ ಶಿಕ್ಷಕರನ್ನು ಪ್ರಶ್ನಿಸಿದರೇ ಗುಳೆ ಸಂದರ್ಭದಲ್ಲಿ ಮಕ್ಕಳ ಸಂಖ್ಯೆ ಶೇ 60 ಕಡಿಮೆಯಾಗುತ್ತದೆ ಎನ್ನುತ್ತಾರೆ.
ಕೊಪ್ಪಳ ಜಿಲ್ಲೆಯಲ್ಲಿಯೇ ಹೆಚ್ಚು:
ಬರದ ದಾಳಿಗೆ ತತ್ತರಿಸಿ ಗುಳೆ ಹೊರಟಿರುವ ಜಿಲ್ಲೆಯಲ್ಲಿ ಕೊಪ್ಪಳದ ಹಳ್ಳಿಗಳೇ ಹೆಚ್ಚು. ಲಾರಿ, ಟ್ರಾಕ್ಟರ್, ಟಂಟಂಗಳಲ್ಲಿ ಹೊರಟಾಗ ಪಾಲಕರಿಗಿಂತ ಹೆಚ್ಚು ಮಕ್ಕಳೇ ಕಂಡು ಬರುತ್ತಾರೆ. ಸರ್ಕಾರ ಬಿಸಿಯೂಟ ನೀಡಿದರೂ ಪಾಲಕರಿಲ್ಲದ ಮನೆಯಲ್ಲಿ ಮಕ್ಕಳು ಇರುವುದಾದರು ಹೇಗೆ ಎಂಬಂತೆ ಊರು ಬಿಟ್ಟು ನಡೆಯುತ್ತಿದ್ದಾರೆ.
ಒಟ್ಟಾರೆ, ಬರದ ಬಿಸಿ ರೈತರಿಗೆ ಅಲ್ಲದೆ ರೈತ ಮಕ್ಕಳಿಗೂ ತಟ್ಟಿದ್ದು ವಿದ್ಯಾರ್ಥಿಗಳು ಕಾರ್ಮಿಕರಾಗಿ ದುಡಿಯುವಂತಾಗಿದೆ.
ಬಾಕ್ಸ್...
ಶೈಕ್ಷಣಿಕ ಹಿನ್ನಡೆ...
ಮಕ್ಕಳು ಶಾಲೆ ತೊರೆದು ಪಾಲಕರೊಂದಿಗೆ ಬೇರೆಡೆ ಹೋದಾಗ ಅಲ್ಲಿ ಕಟ್ಟಡ ಕಾರ್ಮಿಕರಾಗಿ ದುಡಿಯಲೇ ಬೇಕು. ಅಥವಾ ಮೂರು ವರ್ಷದೊಳಗಿದ್ದ ತಮ್ಮನೋ, ತಂಗಿಯನ್ನೋ ನೋಡಿಕೊಳ್ಳಲು ಓದುವ ಮಕ್ಕಳು ಪಾಲಕರೊಂದಿಗೆ ಇರಬೇಕಾದಾಗ ಶೈಕ್ಷಣಿಕ ಹಿನ್ನಡೆಯಾಗುತ್ತಿದೆ. ಈ ಬಗ್ಗೆ ಪಾಲಕರು ಗಮನ ಹರಿಸುತ್ತಿಲ್ಲ ಎಂದು ಶಿಕ್ಷಕರು ಬೇಸರ ಹೊರಹಾಕುತ್ತಿದ್ದಾರೆ.
ಕೋಟ್.
ಮಳೀನೂ ಹೋತು ಬೆಳೀನೂ ಕೈ ಸೇರಲಿಲ್ಲ. ಊರಾಗ ಖಾಲಿ ಕುಂತು ಏನ್ ಮಾಡ್ಬೇಕು. ದುಡ್ಯಾಕರ ಹೋದ್ರ ನಾಲ್ಕು ದುಡ್ಡು ಕೈಯಾಗ ಆಡ್ತಾವ. ನಾವ್ ಹೊಂಟ್ ಮ್ಯಾಲೆ ಮಕ್ಕಳ ಬಿಟ್ ಹೋಗವಲ್ದು. ಅವು ನಮ್ ಕೂಡೇ ಇರಬೇಕು. ಮೂರು ತಿಂಗಳು ಬಿಟ್ ಬಂದ್ ಮ್ಯಾಲಾ ಮಕ್ಳು ಶಾಲಿಗೆ ಹೋಕ್ತಾವ.
ಹನುಮಪ್ಪ , ಗುಡದೂರು ಗ್ರಾಮಸ್ಥ. ಕುಷ್ಟಗಿ
ಕೋಟ್..
ಶಾಲೆ ಬಿಟ್ ನಮ್ ಮಕ್ಕಳು ನಮ್ ಜೊತಿಗಾ ಬರತಾವ. ಕಲಿಕಿ ಹಿಂದ ಉಳಿತದಾ. ಮಾಸ್ತರಾ ಮಕ್ಕಳ ಶಾಲಾ ತಪ್ಸಾಬ್ಯಾಡ್ರೀಯವ್ವಾ ಅಂತಾರ, ನಾವಿಲ್ದೆ ಮಕ್ಕಳೂ ಹೆಂಗ ಇರ‌್ತಾವಾ. ಮಗ ಸಣ್ಣವ ಅದನಾ, ಅವ್ನ ನೋಡ್ಕಾಣಕ್ಕಾ ದೊಡ್ಡಾಕಿ ಬೇಕಲ್ಲ.
ಮಲ್ಲವ್ವ ಉಪ್ಪಾರ, ಕುಷ್ಟಗಿ ರೈತ ಮಹಿಳೆ
ಬಾಕ್ಸ್...
ಶಿಕ್ಷಣ ಇಲಾಖೆಗೆ ಸೂಚನೆ...
ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಕಾರ್ಯ ಶಿಕ್ಷಣ ಇಲಾಖೆಯದ್ದು, ಗುಳೆ ಹೋಗಿರುವ ಕುಟುಂಬಗಳ ಮಕ್ಕಳ ಶಿಕ್ಷಣದ ಬಗ್ಗೆ ಆತಂಕವಿದೆ, ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಅಗತ್ಯ ವ್ಯವಸ್ಥೆ ರೂಪಿಸಬೇಕು ಎಂದು ಕೊಪ್ಪಳ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಅಮರೇಶ ಕುಳಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಾಕ್ಸ್...
ಶಾಲೆಯಿಂದ ಹೊರಗುಳಿದ ಮಕ್ಕಳು (ಕೊಪ್ಪಳ)
1-5ನೇ ತರಗತಿವರೆಗೆ- 218 ಮಕ್ಕಳು
6-7 ನೇ ತರಗತಿವರೆಗೆ- 274 ಮಕ್ಕಳು
( ಉಳಿದಂತೆ ಶಾಲೆಗಳಲ್ಲಿ ಮಕ್ಕಳು ಅಧಿಕ ಪ್ರಮಾಣದಲ್ಲಿ ಗೈರು ಹಾಜರು ಇದ್ದರೂ ಹಾಜರಾತಿ ಮಾತ್ರ ಹಾಕುತ್ತಿದ್ದು, ಮಾಹಿತಿ ಬಹಿರಂಗ ಪಡಿಸಬೇಡಿ ಎಂದು ಶಿಕ್ಷಕರು ಮನವಿ ಮಾಡಿದ್ದಾರೆ)
ಗಂಗಾವತಿ ನಗರದಲ್ಲಿ ಚರಂಡಿಗಳೇ ಧೋಬಿಘಾಟ್_ ಮಾಲತೇಶ್ ಅರಸ್
ಗಂಗಾವತಿ ನಗರದಲ್ಲಿ ಚರಂಡಿಗಳೇ ಧೋಬಿಘಾಟ್
* ಕೊಳಚೆ ನೀರಲ್ಲಿ ನಿತ್ಯ ಶುದ್ಧವಾಗುವ ಬಟ್ಟೆಗಳು
* ಅಗಸರ ಗೋಳು ಕೇಳೋರೇ ಇಲ್ಲ
* ಲಾಡ್ಜ್ , ಮನೆ ಬಟ್ಟೆಗಳಿಗೆ ಗಲೀಜು ನೀರೇ ಗತಿ
* ಮಲ ಮೂತ್ರದಿಂದ ಗಬ್ಬು ನಾರುವ ಸ್ಥಳ
* ಕೈ ಕಾಲುಗಳಲ್ಲಿ ಕಾಡುವ ಅಲರ್ಜಿ
* ಗುಳ್ಳೆಗಳಾಗಿ ಅನಾರೋಗ್ಯ ಭೀತಿ
* ಹಿಡಿಶಾಪ ಹಾಕುವ ಬಡ ಜನತೆ
ಮಾಲತೇಶ್ ಅರಸ್
ಗಂಗಾವತಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಹಿಂದ ವರ್ಗಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದ್ದರೂ ಗಂಗಾವತಿ ನಗರದಲ್ಲಿ ಮಾತ್ರ ಬಟ್ಟೆ ತೊಳೆಯುವ ಮಡಿವಾಳರ (ಅಗಸರು) ಸ್ಥಿತಿ ಮಾತ್ರ ಶೋಚನೀಯವಾಗಿದೆ.
ನಗರದಲ್ಲಿರುವ 25ಕ್ಕೂ ಅಧಿಕ ಲಾಡ್ಜ್ , ಆಸ್ಪತ್ರೆ ಹಾಗೂ ನೂರಾರು ಮನೆಗಳ ಬಟ್ಟೆಗಳು ಸ್ವಚ್ಛವಾಗುವುದು ಎಲ್ಲಿ ಎಂದು ನೀವು ತಿಳಿದುಕೊಂಡರೆ ಒಮ್ಮೆಲೆ ಅಚ್ಚರಿ ಪಡುತ್ತೀರಿ.
ಹೌದು. ಗಂಗಾವತಿ ನಗರದ ಮಹಾವೀರ ಸರ್ಕಲ್‌ನಿಂದ ಕೊಪ್ಪಳ ರಸ್ತೆಗೆ ಬರುವಾಗ ಸಿಗುವ ಅರಿಹಂತ್ ಜೈನ್ ಕಾಲನಿ ಸಮೀಪದ ದೊಡ್ಡ ಚರಂಡಿಯ ಕೊಳಚೆ ನೀರಿನಲ್ಲಿ ಬಟ್ಟೆಗಳು ಮಿಂದೆಳುವುದು.
ರಾಜ್ಯದಲ್ಲಿ ಭತ್ತದನಾಡು ಎಂದೇ ಖ್ಯಾತಿಗಳಿಸಿರುವ ಗಂಗಾವತಿ ನಗರ ಅಭಿವೃದ್ಧಿಯಲ್ಲಿ ಇನ್ನೂ ಅಪಾರ ಹಿಂದುಳಿದಿದೆ ಎಂಬುದಕ್ಕೆ ಇಂದೊಂದು ಸಾಕ್ಷಿ ಸಾಕು.
120 ಕುಟುಂಬಗಳು: ಗಂಗಾವತಿ ನಗರದಲ್ಲಿ ಅಗಸರ ಓಣಿ ಹಾಗೂ ಮಹಬೂಬ್ ನಗರದಲ್ಲಿ ಸುಮಾರು 120ಕ್ಕೂ ಅಧಿಕ ಮಡಿವಾಳರ ಕುಟುಂಬಗಳು ವಾಸಿಸುತ್ತಿದ್ದು, ಎಲ್ಲರೂ ಇದೇ ಕೊಳಚೆ ನೀರಲ್ಲಿ ಬಟ್ಟೆಗಳನ್ನು ತೊಳೆಯುತ್ತಾರೆ. ಮಡಿವಾಳರಲ್ಲದೆ ಉಳಿದ ಬೇರೆ ಅನೇಕ ಕುಟುಂಬದ ಮಹಿಳೆಯರು ಇದೇ ನೀರನ್ನೇ ಬಟ್ಟೆ ತೋಳೆಯಲು ಆಶ್ರಯಿಸಿದ್ದಾರೆ.
ತೆಲಿಪರಹಳ್ಳ: ಇದು ಮೊದಲು ಚರಂಡಿ ಮೋರಿಯಾಗಿರಲಿಲ್ಲ. ಬದಲಿಗೆ ಅನೇಕ ವರ್ಷಗಳಿಂದ ತೆಲಿಪರಹಳ್ಳ ಎಂದೇ ಕರೆಯುತ್ತಿದ್ದಾರೆ. ಇಲ್ಲಿ ನೀರು ಬಿಟ್ಟಾಗ ಮಾತ್ರ ಅನುಕೂಲ. ಆದರೆ ಇದೀಗ ಇದೇ ತೆಲಿಪರಹಳ್ಳಿ ದಾಸನಹಾಳ್ ಕಾಲುವೆ ಗಂಗಾವತಿಯ ಪ್ರಮುಖ ಚರಂಡಿ ನೀರು ಹರಿಯುವ ರಾಜಕಾಲುವೆಯಾಗಿದೆ. ಇದೇ ಚರಂಡಿ ನೀರಿನಲ್ಲಿ ಬಟ್ಟೆ ತೊಳೆಯುವ ಕಾಯಕವೂ ಸಾಗಿದೆ.
ಧೋಬಿಘಾಟ್ ಕೊರತೆ : ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿ ದೊಡ್ಡ ವಾಣಿಜ್ಯ ನಗರಿ. ಇಲ್ಲಿ 25ಕ್ಕೂ ಅಧಿಕ ಲಾಡ್ಜ್‌ಗಳು, ಆಸ್ಪತ್ರೆ, ಖಾಸಗಿ ನರ್ಸಿಂಗ್ ಹೋಂಗಳು ಹಾಗೂ ನೂರಾರು ಕುಟುಂಬಗಳು ಬಟ್ಟೆ ತೊಳೆಯಲು ಮಡಿವಾಳರನ್ನೇ ಆಶ್ರಯಿಸಿದ್ದಾರೆ. ಆದರೆ ಆಧುನಿಕ ತಂತ್ರಜ್ಞಾನಗಳು ಬಂದರೂ ಇಲ್ಲಿಗೆ ಮಾತ್ರ ಇನ್ನು ಧೋಬಿಘಾಟ್ ಬಂದಿಲ್ಲ. ಇದು ಇಡೀ ಅಗಸರನ್ನು ಕೆರಳಿಸಿದೆ. ಈ ಬಗ್ಗೆ ಅನೇಕ ಭಾರಿ ಮನವಿ ಸಲ್ಲಿಸಿದ್ದರೂ ಯಾವುದೂ ಈಡೇರಿಲ್ಲ.
ನೀರಿನ ಸಮಸ್ಯೆ : ಪಕ್ಕದಲ್ಲಿಯೇ ಹೊಸಪೇಟೆ ತುಂಗಾಭದ್ರಾ ಡ್ಯಾಂ ಇದ್ದರೂ ಗಂಗಾವತಿಯಲ್ಲಿ ನೀರಿಗೆ ಹಾಹಾಕಾರ ತಪ್ಪಿಲ್ಲ. ಕುಡಿಯವ ನೀರಿನ ಸಮಸ್ಯೆ ಒಂದೆಡೆಯಾದರೆ, ಇತ್ತ ಬಟ್ಟೆ ತೊಳೆಯುವ ಜನರಿಗೆ ನೀರಿಲ್ಲ. ಅನೇಕ ಬಡ ಕುಟುಂಬಗಳಿಗೆ ಬಟ್ಟೆ ತೊಳೆಯಲು ಚರಂಡಿ ನೀರೇ ಆಶ್ರಯವಾಗಿದೆ.
ಕಾಡುವ ಅನಾರೋಗ್ಯ: ಹೀಗೆ ಚರಂಡಿ ನೀರಿನಲ್ಲಿ ಬಟ್ಟೆ ತೊಳೆಯುವ ಇವರ ಕೈ ಕಾಲುಗಳಲ್ಲಿ ಗುಳ್ಳೆಗಳಾಗಿವೆ. ಉರಿಯಿಂದ ನಿತ್ಯವು ಕಾಡುವ ಅನಾರೋಗ್ಯ ಇವರನ್ನು ಕಂಗೆಡಿಸಿದ್ದರೂ ಬದುಕು ಸಾಗಿಸುವ ಅಸಹಾಯಕತೆಯಿಂದ ಕೆಲಸ ಮಾಡುವ ಅನಿವಾರ್ಯವೂ ಒದಗಿದೆ.
ಕೊಳಚೆ ನೀರನ್ನು ಶುದ್ಧಿಕರಣ ಮಾಡಿ ಬಳಸಬೇಕೆಂದು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿರುವುದು ಗಂಗಾವತಿಗೆ ಮಾತ್ರ ಕೊಳಚೆ ನೀರೇ ಬಟ್ಟೆ ತೊಳೆಯಲು ಆಧಾರವಾಗಿರುವುದು ದುರಂತ.
ಬಾಕ್ಸ್...
ಯಾವ್ಯಾವ ಬಟ್ಟೆ ..
ಗಂಗಾವತಿ ನಗರದಲ್ಲಿರುವ ಲಾಡ್ಜ್‌ಗಳ ಹಾಸಿಗೆ ಬೆಡ್‌ಸಿಟ್‌ಗಳು, ಟವಲ್‌ಗಳು, ಆಸ್ಪತ್ರೆಗಳ ಹಾಸಿಗೆ ಬಟ್ಟೆಗಳು, ಸಿನಿಮಾ ಟಾಕಿಸ್ ಸೀಟ್ ಕವರ್ ಹೀಗೆ ಎಲ್ಲವೂ ಇದೇ ಕೊಳಚೆ ನೀರಿನಿಂದಲೇ ಶುದ್ಧವಾಗುತ್ತಿವೆ. ಆದರೇ ಕೊಳಚೆ ನೀರಿನಿಂದಲೇ ಈ ಬಟ್ಟೆಗಳ ಕೊಳೆ ಹೋಗುತ್ತಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಮಲ ಮೂತ್ರ, ಬೀದಿ ಗಲೀಜುಗಳನ್ನು ಹೊತ್ತ ಈ ಚರಂಡಿ ನೀರು ಕೆಟ್ಟ ವಾಸನೆ ತರುತ್ತಿದ್ದರೂ ಮಹಿಳೆಯರು ಯಾವುದೇ ಬೇಸರವಿಲ್ಲದೆ ಇಲ್ಲಿ ಬಟ್ಟೆ ತೊಳೆಯುತ್ತಾರೆ. ಆದರೇ ಇಲ್ಲಿವರೆವೆಗೂ ಯಾರೂ ಈ ಅವ್ಯವಸ್ಥೆ ಪ್ರಶ್ನಿಸಿಲ್ಲದಿರುವುದು ಮಾತ್ರ ಆಶ್ಚರ್ಯ.
ಕೋಟ್..1
ನಾವು ಸಣ್ಣರಿಂದ ಇದೇ ಕೆಲ್ಸಾ ಮಾಡ್ತಾ ಬಂದೀವ್ರೀ. ಈ ಪರಿ ದೊಡ್ಡ ಊರಾದ್ರೂ ಗಂಗಾವತಿಲಿ ಧೋಬಿಘಾಟ್ ಇಲ್ಲ. ನಮ್ ಅಗಸರ ಕಷ್ಟ ಕೇಳೋರೇ ಇಲ್ಲ. ಕೈ ಕಾಲು ಸಲಿತವಾ. ಸಣ್ ಸಣ್ ಗುಳ್ಳೆಗಳಾಗಿ ತೀಟೆ ಬರುತ್ರಿ. ವೋಟ್ ಹಾಕ್‌ಬೇಕಾದ್ರ ಮನಿಗೆ ಬರ‌್ತಾರ‌್ರೀ, ಬಂದ್ ಹೋತ್ನಾಗ ಧೋಬಿಘಾಟ್ ಮಾಡ್ತೀನಿ ಅಂದಾರು ಇತ್ತ ತಿರುಗಿ ನೋಡಿಲ್ರೀ.. ಇವರಿಗೆ ಎಷ್ಟು ಬೈದ್ರೂ ಅಷ್ಟೇರೀ.
ಶಿವಮ್ಮ, ಹಿರಿಯ ಮಹಿಳೆ
ಬಾಕ್ಸ್...
ನಾಚಿಕೆಯಾಗಬೇಕು ...
ಗಲೀಜು ನೀರಲ್ಲಿ ತೊಳೆಯಬೇಕು ಬಟ್ಟೆ : ತುಂಬಿಸಿಕೊಳ್ಳಬೇಕು ಹೊಟ್ಟೆ ಎನ್ನುವ ಹೊಸ ಗಾದೆ ಗಂಗಾವತಿಗೆ ಹೇಳಿ ಮಾಡಿಸಿದಂತಿದೆ. ಇಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷೃ ಅಧಿಕಾರಿಗಳ ಬೇಜವಾಬ್ದಾರಿಗೆ ಮಡಿವಾಳ ಸಮುದಾಯ ಹಾಗೂ ಮಹಿಳೆಯರು ಹಿಡಿಶಾಪ ಹಾಕುತ್ತಿದ್ದಾರೆ. ಮತ ಹಾಕಿಸಿ ಕೊಳ್ಳಲು ಮನೆ ಬಾಗಿಲಿಗೆ ಬರುವ ಮಂದಿ ಗೆದ್ದ ಮೇಲೆ ನಮ್ಮತ್ತ ಬರೋದೆ ಇಲ್ಲ ಥೂ.. ನಾಚಿಕೆಯಾಗಬೇಕು ಅವರ ಜನ್ಮಕ್ಕೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾಜಪ್ಪ 9916392461
Subscribe to:
Posts (Atom)