Friday, September 19, 2014

ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿ (ಮಾಲತೇಶ್ ಅರಸ್ ಹರ್ತಿಮಠ.)

  ಗುರುವೇ ನಿಮಗೆ ಕೋಟಿ ನಮನ....

  ಜಗವೇ ಮನೆಯಾಗಿ, ಜನರೇ ಉಸಿರಾಗಿ
  ಶ್ರೀ ಮದ್ ಜಗದ್ಗುರು ರೇವಣಸಿದ್ದೇಶ್ವರನ ಅಣತಿ
  ಭರತ ಖಂಡದ ಹಾಲುಮತೋದ್ದಾರಕ ಸಾರಥಿ
  ಕುರುಬರ ಬಲವಾಗಿ ನೆಲೆಗೊಂಡ ಗುರುವೇ
  ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿ ಒಡೆಯನೇ
  
  ಸಾಧುವಾಗಿ, ಸದ್ಗುರುವಾಗಿ, ಪ್ರಗತಿಶೀಲ ಧೀರನಾಗಿ
  ಸಮಾನತೆಯ ಸಾಧಕರಾಗಿ, ಚೈತನ್ಯದ ಚೆಲುಮೆಯಾಗಿ
  ನಮ್ಮೆಲ್ಲರ ದಾರಿದೀಪವಾಗಿ, ಕನಕದೀವಿಗೆಯ ಸೇವಕನಾಗಿ
  ಶ್ರೇಷ್ಟ ಕಾವಿಧಾರಿಯಾಗಿ, ಧರೆಯಲಿ ನೆಲೆಗೊಂಡ ಗುರುವೇ 
  ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿ ಒಡೆಯನೇ
  
  ಮಹಾ ಸಂಸ್ಥಾನದ ಅಧಿಪತಿಯಾಗಿ, ಭಕ್ತರ ದೈವವಾಗಿ
  ಸೌಮ್ಯ ವ್ಯಕ್ತಿತ್ವದ ದೊರೆಯಾಗಿ, ಹೋರಾಟದ ಹುಲಿಯಾಗಿ
  ನೋವು ನಲಿವಿಗೆ ಮಿಡಿವ ಸಹೃದಯ ಮಿತ್ರನಾಗಿ 
  ಕುರುಬರ ನೇತಾರನಾಗಿ ಅವತರಿಸಿ ನೆಲೆಗೊಂಡ ಗುರುವೇ 
  ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿ ಒಡೆಯನೇ
  
  ಧೀರನಡೆಯ ವೀರನಾಗಿ, ದಿಟ್ಟತನದ ಶೂರನಾಗಿ
  ಕಾಗಿನೆಲೆಯ ಯೋಧನಾಗಿ, ನಿತ್ಯ ಅನ್ನಧಾನಿಯಾಗಿ
  ಶಿಕ್ಷಣದ ಪ್ರೇಮಿಯಾಗಿ, ಕೃಷಿ ನೇಗಿಲಯೋಗಿಯಾಗಿ
  ಸಮಾಜಮುಖಿಯ ಗುರುವಾಗಿ, ನೆಲೆಗೊಂಡ ಗುರುವೇ
  ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿ ಒಡೆಯನೇ
  
  ಹರ್ತಿಕೋಟೆಯ ಸುಪುತ್ರನಾಗಿ, ಕನಕ ಸಂಘದ ರೂವಾರಿಯಾಗಿ
  ಅಮೃತ ಕಾಯಕಶೀಲನಾಗಿ, ಸದಾ ಜಾಗೃತಿಯ ಸಾಮ್ರಾಟನಾಗಿ
  ಸಂಘಟನೆಯ ಯುವಶಕ್ತಿಯಾಗಿ, ಸದ್ಗುಣ ಸಂಪನ್ನಮೂರ್ತಿಯಾಗಿ
  ಧರ್ಮ-ಸಂಸ್ಕೃತಿ ಅರಿತ ಸುಜ್ಞಾನಿಯಾಗಿ ನೆಲೆಗೊಂಡ ಗುರುವೇ 
  ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿ ಒಡೆಯನೇ
  
 ಕನಕ ದಾಸರ ಆರಾಧಕನಾಗಿ, ಧಾರ್ಮಿಕ ಚಿಂತಕನಾಗಿ
 ಭುವಿಯಲಿ ಅನಿಕೇತನನಾಗಿ, ಸಾಧನೆಯ ಹರಿಕಾರನಾಗಿ
 ಅನಾಥಮಕ್ಕಳಿಗೆ ತಾಯಿಯಾಗಿ, ಸರ್ವೋದಯದ ಮುಗಿಲಾಗಿ
 ಸಮಸ್ತರನ್ನ ಅಭಿವೃದ್ದಿಯೆಡೆಗೆ ಸಾಗಿಸಲು ನೆಲೆಗೊಂಡ ಗುರುವೇ
 ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿ ಒಡೆಯನೇ
  
  ಸಾಮಾಜಿಕ ಜೀವಿಯಾಗಿ, ಆರ್ಥಿಕ ಚಿಂತಕನಾಗಿ
  ಸಾಹಿತ್ಯಿಕ ಕವಿಯಾಗಿ, ಸೇವಾಬುದ್ದಿಯ ಸಿಂಚನರಾಗಿ
  ವಿಜಯದ ಹಾದಿಯಲಿ ನಡೆಯುತಿಹ ಗಜನಾಗಿ
  ನಮ್ಮೆಲ್ಲರ ಚೇತನವಾಗಿ ಭುವಿಗಿಳಿದು ನೆಲೆಗೊಂಡ ಗುರುವೇ 
  ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿ ಒಡೆಯನೇ
  
  ಕಾಯಕ ಜೀವಿಯಾಗಿ, ಅಧ್ಯಯನದಲಿ ವಿದ್ಯಾರ್ಥಿಯಾಗಿ
  ಅಂತಃಕರಣದ ಆತ್ಮ ಬಂಧುವಾಗಿ, ಬಡವರ ಪೋಷಕರಾಗಿ
  ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಜೊತೆಯಾಗಿ
  ಹಾಲುಮತೋದ್ದಾರಕ್ಕಾಗಿ ಕುಲದಲಿ ಹುಟ್ಟಿದ ಗುರುವೇ 
  ಶ್ರೀ ಕಾಗಿನೆಲೆ ಮಹಾಸಂಸ್ಥಾನ  ಕನಕ ಗುರುಪೀಠದ ಅಧಿಪತಿ
  ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿ ಒಡೆಯನೇ
  ತಮಗಿದೋ ಭಂಡಾರದ ಕಂದನ  ಕೋಟಿ ಕೋಟಿ ನಮನಗಳು...
                                                            
                                                 -ಮಾಲತೇಶ್ ಅರಸ್ ಹರ್ತಿಮಠ.
                                                          9480472030

No comments:

Post a Comment