Wednesday, September 24, 2014

ಜಗಲಿ ಕಟ್ಟೆ - ಮಾಲತೇಶ್ ಅರಸ್

                                               
 ಯಾವ ಕಾಂಗ್ರೆಸ್‌ಗೆ ಓಟ್ ಹಾಕೋದು ಶಿವಾ...

 ನಾವೇ ಒಂದ್ ಸುವರ್ಣ ಕರ್ನಾಟಕ ಕಾಂಗ್ರೇಸ್ ಪಕ್ಷ ಅಂತ  ಕಟ್ಟುವಾ.
 
  ಈ ಬಾರಿ ಚುನಾವಣೆಲಿ ಮತದಾರರು ಸಖತ್ ಕನ್‌ಪ್ಯೂಷನ್ ಆಯ್ತರೆ ಕಣಲೇ ಅಂತ  ಪಟ್ರೆ ಹೇಳ್ತಾ ಇದ್ದುದ್ದ ಕಂಡ ಬಸ್ಯಾ, ಯಾಕಪ್ಪ ಹೆಂಗೆ ಹೇಳ್ತಿಯಾ ಕನ್‌ಪ್ಯೂಸ್ ಆಯ್ತರೆ ಅಂತ ತಗಾದೆ ತೆಗೆದ. 
 ಅಲ್ಲಾ ಕಣಲೇ ಬಸ್ಯಾ ನಾವು ಹೋದ್ ಕಿತಾ ಓಟ್ ಹಾಕ್ವಾಗ ಒಂದೇ ಒಂದು ಕಾಂಗ್ರೆಸ್ ಪಕ್ಷ ಇತ್ತಲ್ವಾ. ಈ ಕಿತಾ ಮೂರಾಗಿದವೆ ಅಂದ ಪಟ್ರೆ. 
 ಒಂದು ರಾಷ್ಟ್ರೀಯ ಕಾಂಗ್ರೆಸು. ಅದೆ ನಮ್ ಸೋನಿಯಾ ಗಾಂಧಿದು. ಇನ್ನೊಂದು ಬಿಎಸ್ಸಾರ್ ಕಾಂಗ್ರೆಸು, ಬಳ್ಳಾರಿ ಶ್ರೀ ರಾಮುಲುದು,  ಇದೀಗ ಜವಳಿ ಮಿನಿಸ್ಟ್ರು  ಅದೇನೋ ವರ್ತೂರು ಕಾಂಗ್ರೆಸ್ ಅಂತ  ಹೊಸ ಪಕ್ಷ ಕಟ್ತಾ ಇದಾರಂತೆ. ಹಿಂಗಾಂದ್ರೆ ನಾವು ನಮ್ಮ ಜನಕ್ಕೆ ಕಾಂಗ್ರೆಸ್ಗೆ ವೋಟು ಹಾಕ್ರೀ ಅಂತ ಹೆಂಗೆ ಹೇಳೋದು. ಯಾವ ಕಾಂಗ್ರೆಸು ಅಂತ ಕನ್‌ಪ್ಯೂಸ್ ಆಗೊದಿಲ್ವೇ ಅವರಿಗೆ ಅಂದ ಪಟ್ರೆ.
 ಹೌದೌದು. ನಮ್ಮ ರಾಜ್ಯದಾಗೆ ಅದೇಕೋ ಪ್ರಾದೇಶಿಕ ಪಕ್ಷಗಳು ದಿನೇ ದಿನೇ ಜಾಸ್ತಿ ಆಕ್ತಾ ಇದಾವಪ್ಪ. ಬಿಜೆಪಿ ಸಹವಾಸ ಸಾಕು ಅಂತ ರಾಜೀನಾಮೆ ಕೊಟ್ಟು ಮಾಜಿ ಸಿಎಂ ಯಡಿಯೂರಪ್ಪನೋರು ಕೆಜೆಪಿನ ಈಗಾಗ್ಲೆ ಸ್ಟ್ರಾಂಗ್ ಮಾಡ್ತಾ ಅವ್ರಂತೆ.  ಅತ್ಲಾಗೆ  ಮಾಜಿ ಪ್ರಧಾನಿ ದೇವೇಗೌಡ್ರು ರಾಜ್ಯ ವ್ಯಾಪಿ ಪ್ರವಾಸ ಮಾಡಿ ಜೆಡಿಎಸ್ ಅಧಿಕಾರಕ್ಕೆ ತಂದೆ ತರ‌್ತೀನಿ ಅಂತಾವ್ರೆ. ಇತ್ಲಾಗೆ ಮದ್ಯದ ದೊರೆ ಮಲ್ಯ ಅವರೂ ಮತ್ತೆ ಜನತಾ ಪಕ್ಷವ ಚಾಲ್ತಿ ಮಾಡ್‌ತೀತಿ ಅಂತಾ ಸುಳಿವು ಕೊಟ್ಟಾವ್ರಂತೆ.  ನೈಸ್ ರೋಡ್ ಅಶೋಕ್ ಖೇಣಿ ಮಕ್ಕಳ ಪಕ್ಷವ ಸ್ಟ್ರಾಂಗ್ ಮಾಡ್ತಾವ್ರಂತೆ. 
 ಅರೆರೆ ಹಿಂಗೆ ಆದ್ರೆ ತಮಿಳು ನಾಡು ಮತ್ತು ಆಂದ್ರದಾಗೆ ಪ್ರಾದೇಶಿಕ ಪಕ್ಷಗಳು ಸ್ಟ್ರಾಂಗ್ ಆಗೋತರಾ ಇಲ್ಲೂ ಸ್ಟ್ರಾಂಗ್ ಆಕ್ತಾವೆ ಅಂತಿಯಾ ಅಂದ ಬಸ್ಯಾ..
 ಅದಿರ‌್ಲೀ ಕಣಣ್ಣೋ ಮುಂದಿನ ವಿಧಾನಸಭೆಯೂ ಅತಂತ್ರವಾದಲ್ಲಿ ‘ಸ್ವತಂತ್ರ’ ನಿರ್ಧಾರದ ಮೂಲಕ ರಾಜಕೀಯ ಲಾಭ ಮಾಡಿಕೊಳ್ಳುವ ಕನಸು ಕಾಣುತ್ತಿರುವ ಜವಳಿ ಸಚಿವ ವರ್ತೂರು ಪ್ರಕಾಶ್  ಸ್ವಂತ ವರ್ತೂರು ಕಾಂಗ್ರೆಸ್ ಪಕ್ಷ ನಿರ್ಮಿಸೋದು ಓಕೆ.  ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನ ಅಂತ ಮಾಡಿದರಲ್ಲ ಕಾಂಗ್ರೆಸ್ ಅಂತ ಇರೋದು ಕೈ ಬಿಡು ಅಂತ ಕೇಳುವ ಅಂತಿದೀನಿ ಹೆಂಗೆ ಅಂದ ಪಟ್ರೆ.
 ಅದೆಲ್ಲಾ ಓಕೆ ಇವರು ಸ್ವಂತ ಪಕ್ಷವ ಕಟ್ಟೋರು ಸ್ವಂತ ಹೆಸರೇ ಇಡ್ಬೇಕಪ್ಪ ಅದ್ ಬಿಟ್ಟು ಕಾಂಗ್ರೆಸ್ ಅಂತವಾ ಸೇರಿಸಿ ನಮಗೆ ಕನ್‌ಪ್ಯೂಸ್ ಮಾಡ್ ಬಾರದು ಅಲ್ವಾ, ನಾವು ಮುಂದೆ  ಹಿಂಗಾದ್ರೆ ಯಾವ ಕಾಂಗ್ರೆಸ್‌ಗೆ ಓಟ್ ಹಾಕೋದು ಅಂದ ಪಟ್ರೆ. ಅದಕ್ಕೆ ಯಾಕೆ ಯೋಚ್ನೇ ಮಾಡ್ತೀಯೊ ಪಕ್ಷ  ಕಟ್ಟೋದ್ ಬಾರಿ ಈಜಿ, ನಾವೇ ಒಂದ್ ಸುವರ್ಣ ಕರ್ನಾಟಕ ಕಾಂಗ್ರೇಸ್ ಪಕ್ಷ ಅಂತ ಕಣ್ಣೋಣ ಬಿಡು ಅಂದಕೂಡಲೇ ಅಣ್ಣೋ..ಬಿಎಸ್ಸಾರ್ ಕಾಂಗ್ರೆಸ್‌ನಾಗೆ ಸಾಂಫ್ಟ್‌ವೇರ್ ಕಂಪನಿಗಳಲ್ಲಿ ಕೊಡೊತರಾ ಐಡೆಂಟಿಟಿ ಕಾರ್ಡ್ ಕೋಡ್ತಾವ್ರಂತೆ ಪೊಟೋ ತೆಗೆಸ್ಬೇಕು ಬರ‌್ಲಾ.. ಅಂತ ಮೆಲ್ಲಗೆ ಓಟ ಕಿತ್ತ....ಬಸ್ಯಾ..

 - ಮಾಲತೇಶ್ ಅರಸ್ ಹರ್ತಿಮಠ
 

No comments:

Post a Comment