Thursday, September 4, 2014

ಪಿ.ಆರ್.ತಿಪ್ಪೇಸ್ವಾಮಿ ಕಲಾ ಸಂಭ್ರಮ, P.R.Thippeswamy Kala SAMBRMA Mysore_Malathesh Urs Harthikote


       ಪಿ.ಆರ್.ತಿಪ್ಪೇಸ್ವಾಮಿ ಕಲಾ ಸಂಭ್ರಮ, ಪಿ.ಆರ್.ಟಿ ಕಲಾ ಪ್ರಶಸ್ತಿ ಪ್ರದಾನ. 

        ರಾಜ್ಯ ಮಟ್ಟದ ಕಲಾ ಶಿಬಿರ ಮತ್ತು ರಾಷ್ಟ್ರಮಟ್ಟದ ಕಲಾ ಪ್ರದರ್ಶನ.














 ಬೆಂಗಳೂರು: ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನ, ಮೈಸೂರು, ಕನ್ನಡ  ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು,  ಕರ್ನಾಟಕ ಲಲಿತಾಕಲಾ ಅಕಾಡೆಮಿ, ಕರ್ನಾಟಕ ಜಾನಪದ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ನಾಡಿನ ಶ್ರೇಷ್ಠ ಕಲಾವಿದ, ಜಾನಪದ ತಜ್ಞ ದಿವಂಗತ ಪಿ.ಆರ್. ತಿಪ್ಪೇಸ್ವಾಮಿ ಅವರ ಸ್ಮರಣಾರ್ಥ ಸೆಪ್ಟಂಬರ್ 12. 13 ಮತ್ತು 14 ಮೂರು ದಿನಗಳ ಕಾಲ ಮೈಸೂರಿನ ವಿಜಯನಗರದ ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ ಆವರಣದಲ್ಲಿ  ಪಿ.ಆರ್. ತಿಪ್ಪೇಸ್ವಾಮಿ ಕಲಾ ಸಂಭ್ರಮ,  ರಾಜ್ಯ ಮಟ್ಟದ ಕಲಾ ಶಿಬಿರ ಮತ್ತು ರಾಷ್ಟ್ರಮಟ್ಟದ ಕಲಾ ಪ್ರದರ್ಶನ ಹಾಗೂ ಇದೇ ಪ್ರಥಮ ಬಾರಿಗೆ ಗುಲ್ಬರ್ಗದ ಹಿರಿಯ ಚಿತ್ರ ಕಲಾವಿದ  ಎ.ಎಸ್.ಪಾಟೀಲ್ ಅವರಿಗೆ ಪಿ.ಆರ್.ಟಿ ಕಲಾ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷರಾದ ರಾಜಶೇಖರ ಕದಂಬ ತಿಳಿಸಿದರು.

 ಬೆಂಗಳೂರಿನ  ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸೆ.12 ರಂದು ಬೆಳಗ್ಗೆ 11 ಗಂಟೆಗೆ ಕಲಾ ಸಂಭ್ರಮವನ್ನು ಕಂದಾಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಉದ್ಘಾಟಿಸಲಿದ್ದಾರೆ. ಮೈಸೂರು ವಿವಿ ವಿಶ್ರಾಂತ ಕುಲಪತಿ, ನಾಡೋಜ ದೇ.ಜವರೇಗೌಡ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಅಧ್ಯಕ್ಷ ಡಾ. ಎಂ.ಎಸ್.ಮೂರ್ತಿ ಅವರು ಕಲಾ ಶಿಬಿರಕ್ಕೆ ಚಾಲನೆ ನೀಡುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಕೆ.ಎ. ದಯಾನಂದ ಅವರು ಕಲಾ ಪ್ರದರ್ಶನಕ್ಕೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಮೈಸೂರು- ಕೊಡಗು ಸಂಸದ ಪ್ರತಾಪ ಸಿಂಹ, ಖ್ಯಾತ ವೈದ್ಯರಾದ ಡಾ. ಎಚ್.ಟಿ. ರುದ್ರಣ್ಣ, ರಾಷ್ಟ್ರೀಯ ಸಂತ ಕನಕದಾಸ ಅಧ್ಯಯನ ಕೇಂದ್ರದ ಆಡಳಿತಾಧಿಕಾರಿ ಕಾ.ತ. ಚಿಕ್ಕಣ್ಣ, ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ.ಎಚ್. ಜೆ. ಲಕ್ಕಪ್ಪ ಗೌಡ, ಮೈಸೂರು ಮುಡಾ ಆಯುಕ್ತ ಎಸ್. ಪಾಲಯ್ಯ, ಚಾಮರಾಜ ಕ್ಷೇತ್ರ ಶಾಸಕ ವಾಸು ಭಾಗವಹಿಸಲಿದ್ದಾರೆ ಎಂದರು.

 ವಿಚಾರ ಸಂಕಿರಣ: ‘‘ಪಿ.ಆರ್.ಟಿ ಮತ್ತು ಚಿತ್ರಕಲೆ’’ ಕುರಿತು ಮಧ್ಯಾಹ್ನ 2 ಗಂಟೆಗೆ ವಿಚಾರ ಸಂಕಿರಣ ನಡೆಯಲಿದ್ದು, ಮೈಸೂರಿನ ಹಿರಿಯ ಕಲಾವಿದ ರಾಮದಾಸ್ ಆದ್ಯಂತಾಯ ಅಧ್ಯಕ್ಷತೆ ವಹಿಸಲಿದ್ದಾರೆ. ‘ಪಿ.ಆರ್.ಟಿ ಲೇಖಕರಾಗಿ ಮತ್ತು ಕಲಾ ವಿಮರ್ಶಕರಾಗಿ’ ಎಂಬ ವಿಷಯದ ಕುರಿತು ಹಿರಿಯ ಕಲಾವಿದ ಎಸ್.ಎಂ. ಜಂಬುಕೇಶ್ವರ್, ಪಿ.ಆರ್.ಟಿ ಕಂಡ ಕಲೋಪಾಸಕರು ಎಂಬ ವಿಷಯದ ಕುರಿತು ಹಿರಿಯ ಕಲಾವಿದ ಎಲ್. ಶಿವಲಿಂಗಪ್ಪ, ಪಿ.ಆರ್.ಟಿ ಕಲೆಯಲ್ಲಿ ಪಾರಂಪರಿಕತೆ ಮತ್ತು ಪ್ರಸ್ತುತತೆ ಕುರಿತು ಮಂಗಳೂರು ಮಹಾಲಸಾ ಚಿತ್ರಕಲಾ ಶಾಲೆ ಉಪನ್ಯಾಸಕ ಎನ್.ಎಸ್ ಪತ್ತಾರ್ ವಿಷಯ ಮಂಡಿಸಲಿದ್ದಾರೆ ಎಂದರು.
 ಸೆ.13 ರಂದು ಬೆಳಗ್ಗೆ 10 ಗಂಟೆಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು, ಸಹಕಾರ ಸಚಿವ ಎಚ್.ಎಸ್ ಮಹದೇವ ಪ್ರಸಾದ್ ಉದ್ಘಾಟಿಸಲಿದ್ದಾರೆ. ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ.ಸೋಮಶೇಖರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ  ಮಂಜುಳಾ ಮಾನಸ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿರ್ಮಲ ಮಠಪತಿ, ಪಿ.ಆರ್.ಟಿ ಪ್ರತಿಷ್ಠಾನದ ನಿರ್ದೇಶಕ ಎ.ಪಿ  ರಾಜಶೇಖರ್, ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ ನಿರ್ದೇಶಕ ಬಾಬುರಾವ್, ವಿಶ್ರಾಂತ ಕಾರ್ಯಪಾಲಕ ಅಭಿಯಂತರ ಲಿಂಗಪ್ಪ  ಭಾಗವಹಿಸಲಿದ್ದಾರೆ.

 ವಿಚಾರ ಸಂಕಿರಣ: ‘‘ಪಿ.ಆರ್.ಟಿ ಮತ್ತು  ಜಾನಪದ’’ ಕುರಿತು ಮಧ್ಯಾಹ್ನ 2 ಗಂಟೆಗೆ ವಿಚಾರ ಸಂಕಿರಣ ನಡೆಯಲಿದ್ದು,  ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಪಿ.ಆರ್.ಟಿ ರೂಪಿಸಿದ ವಸ್ತು ಸಂಗ್ರಹಾಲಯಗಳ ಲೋಕ ದರ್ಶನದ ಕುರಿತು ಜಾನಪದ ತಜ್ಞ ಡಾ. ಕಾಳೇಗೌಡ ನಾಗವಾರ, ಪಿ.ಆರ್.ಟಿ ಜನಪದ ಕ್ಷೇತ್ರಕಾರ್ಯದ ನೆಲೆ-ನಿಲುವುಗಳ ಕುರಿತು ಜಾನಪದ ತಜ್ಞ ಡಾ. ಕೃಷ್ಣಮೂರ್ತಿ ಹನೂರು, ಪಿ.ಆರ್.ಟಿ ವ್ಯಕ್ತಿತ್ವ, ಸಾಧನೆ ಮತ್ತು ಸಿದ್ಧಿ ಕುರಿತು ಮೈಸೂರು ಮಹಾರಾಣಿ ಕಲಾ ಕಾಲೇಜು ಪ್ರಾದ್ಯಾಪಕ ಪ್ರೋ ಎಂ. ವರದರಾಜು ವಿಷಯ ಮಂಡಿಸಲಿದ್ದಾರೆ.
 ಸೆ.14ರ ಸಂಜೆ 4 ಗಂಟೆಗೆ ಪಿ.ಆರ್ ತಿಪ್ಪೇಸ್ವಾಮಿ ಕಲಾ ಸಂಭ್ರಮದ ಸಮಾರೋಪ ನಡೆಯಲಿದ್ದು  ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳವರು ಸಾನಿಧ್ಯವಹಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾರೋಪ ಭಾಷಣ ಹಾಗೂ ಪಿ.ಆರ್.ಟಿ  ಕಲಾ ಪ್ರಶಸ್ತಿಯನ್ನು ಗುಲ್ಬರ್ಗದ ಹಿರಿಯ ಚಿತ್ರ ಕಲಾವಿದ  ಎ.ಎಸ್.ಪಾಟೀಲ್ ಅವರಿಗೆ ಪ್ರದಾನ ಮಾಡುವರು.  ಲೋಕೋಪಯೋಗಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಡೇವಿಡ್ ನಿರ್ದೇಶನದ ಪಿ.ಆರ್.ಟಿ ಸಾಕ್ಷೃಚಿತ್ರವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಬಿಡುಗಡೆ ಮಾಡುವರು. ಮಾನಸ ಸಂಪಾದಕತ್ವದ ‘ ಕಾಯಕ ಯೋಗಿ’ ಸ್ಮರಣ ಸಂಚಿಕೆಯನ್ನು ಮೈಸೂರು  ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಬಿಡುಗಡೆ ಮಾಡುವರು.
 ಪಿ.ಆರ್. ತಿಪ್ಪೇಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಕದಂಬ ಪ್ರಾಸ್ತಾವಿಕ ನುಡಿಗಳನ್ನಾಡುವರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಎಚ್.ಎಂ ರೇವಣ್ಣ, ತುಮಕೂರು ಪ್ರಜಾಪ್ರಗತಿ ಪತ್ರಿಕೆ ಸಂಪಾದಕ ಎಸ್. ನಾಗಣ್ಣ, ವಿಧಾನ ಪರಿಷತ್ ಸದಸ್ಯ ಡಾ.ಹುಲಿನಾಯ್ಕರ್, ಕವಿಗಳಾದ ಎಸ್.ಜಿ. ಸಿದ್ದರಾಮಯ್ಯ, ವಿಶ್ರಾಂತ ಪ್ರಾಧ್ಯಾಪಕ, ಕವಿ ಪ್ರೊ. ಎಚ್.ಎಂ. ಪರಮೇಶ್ವರಯ್ಯ, ಚಿತ್ರವನದ ಹಿರಿಯ ಕಲಾವಿದ ಎನ್. ರಾಘವೇಂದ್ರ ಮೂರ್ತಿ, ಹಿರಿಯ ಪತ್ರಕರ್ತ ರುದ್ರಣ್ಣ ಹರ್ತಿಕೋಟೆ ಭಾಗವಹಿಸಲಿದ್ದಾರೆ.

 ಸೆ. 14ರ  ಬೆಳಗ್ಗೆ 11 ಗಂಟೆಗೆ ಸಂಡೂರು ಹಿರಿಯ ಕಲಾವಿದ ವಿ.ಟಿ. ಕಾಳೆ ಅಧ್ಯಕ್ಷತೆಯಲ್ಲಿ ಪಿ.ಆರ್.ಟಿ ಒಡನಾಡಿಗಳೊಂದಿಗೆ ಸಂವಾದ ನಡೆಯಲಿದೆ. ಚಿತ್ರ ಕಲಾವಿದರು, ಜಾನಪದ ತಜ್ಞರು, ಸಾಹಿತಿಗಳು, ಚಿತ್ರ ಕಲಾಶಿಕ್ಷಕರು, ಶ್ರೀ ಕಲಾ ನಿಕೇತನ, ಕಾವಾ, ವೈಜಯಂತಿ, ರವಿವರ್ಮ ಕಲಾಶಾಲೆಯ ಹಳೆಯ ಮತ್ತು ಪ್ರಸ್ತುತ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
 ಇಲ್ಲಿ ನಡೆಯುವ ರಾಜ್ಯ ಮಟ್ಟದ ಕಲಾ ಶಿಬಿರ ಮತ್ತು ರಾಷ್ಟ್ರ ಮಟ್ಟದ ಕಲಾ ಪ್ರದರ್ಶನದಲ್ಲಿ 25 ಪ್ರಸಿದ್ಧ ಕಲಾವಿದರು ಭಾಗವ ಹಿಸಲಿದ್ದಾರೆ ಎಂದು ವಿವರಿಸಿದರು.



No comments:

Post a Comment