ಶ್ರೀರಾಮುಲು ರಥ... ಛತ್ರಿ ಪೆದ್ದಣ್ಣ . ಕೋಟಿ ಹಮ್ಮರ್ ಕಾರಣ್ಣ
ನಾನೆಂದು ನಿಮ್ಮವನು
ನಿಮಗಾಗಿ ಬಂದವನು
ನನಗಾರ ಭಯವಿಲ್ಲ.
ನನಗಾರ ಅಲುಕಿಲ್ಲಾ
ಸಿಂಹದ ಮರಿನಾನು
ಅಂತಾ ಶ್ರೀರಾಮುಲು ಹಾಡು ಬಿಜೆಪಿ ಕೇಳ್ತಾ ಇತ್ತು.
ಅಮೇರಿಕಾದಾಗಿ ಕತ್ತೆ ಅಧ್ಯಕ್ಷರನ್ನ ಆಯ್ಕೆ ಮಾಡುತ್ತೆ. ಇಲ್ಲಿ ನಾವು ಕತ್ತೆಗಳನ್ನ ಆಯ್ಕೆ ಮಾಡ್ತೀವಲ್ಲೋ ಅಂತ ಕಟ್ಟೆ ಮೇಲೆ ಕೂತು ಪತ್ರುವಳ್ಳಿಗೆ ಹೇಳ್ತಾ ಇದ್ದ ಪುಕ್ಸಟ್ಟೆ ಪಟ್ರೆ. ಹೌದಲೇ.. ಅಂತ ಎಂಟ್ರಿ ಕೊಟ್ಟ ಪರಮೇಸಿ ಅದೇನು ಬೆಲೆ ಅಂತಿಯೋ ನಾವು ಕತ್ತೆಗಳನ್ನು ಹಳೇ ಬಟ್ಟೆ ಎತ್ಕೋಡೋಗಕ್ಕೆ ಬಳಸ್ತೀವಿ, ಆದ್ರೆ ಅಮೇರಿಕಾದಾಗೆ ಕತ್ತೆಗೇನ್ ಗೌರವಲೇ ಅಂದ.
ಹಾಗೆ ಅಂಗಡಿ ಕಡೆ ಹೋಕ್ತಾ ಇದ್ದ ಸುಮ್ಕಿರಮ್ಮನ ಕಿವಿಗೆ ಈ ಕತ್ತೆ ವಿಷ್ಯ ಬಿದ್ದ ಕೂಡಲೇ ಏನೋ ನನ್ ನೋಡಿ ಕತ್ತೆ ಗಿತ್ತೆ ಅಂತಿದೀರಾ ಯಾಕೇ ಯಂಗೈತೆ ಮೈಗೆ. ಅಂತ ಜೋರು ದನಿಯಲ್ಲಿ ಕೆರಳೋದ..
ಸುಮ್ಕಿರಕ್ಕೋ... ನಿನ್ನನ್ ಯಾರಾರಾ ಕತ್ತೆಗೆ ಹೋಲ್ಸಾಕಾಗುತ್ತಾ, ಕತ್ತೆ ಅಂದ್ರೇ ಏನು, ನೀನು ಅಂದ್ರ ಏನು... ಅಂದ ಪುಕ್ಸಟ್ಟೆ.
ಅಲ್ಲಾ. ಕತ್ತೆ ಅಮೇರಿಕಾದಲ್ಲಿ ಒಬಾಮಾ ಅವರನ್ನು ಅಧ್ಯಕ್ಷ ಮಾಡದೇ.. ನೀವು ಯಾರ‌್ನಾ ಅಧ್ಯಕ್ಷ ಮಾಡಿರೀ ಏಳಕ್ಕ ಅಂದ ಪರಮೇಸಿ.
ಅಧ್ಯಕ್ಷ ಮನೆ ಹಾಳಾಗ್ ಹೋಗ ಸುಮ್ಕಿರಲ. ಅಲ್ಲಿ ಒಬ್ನೆ ಅಧ್ಯಕ್ಷ. ಇಲ್ಲಿ ಜೆಡಿಎಸ್‌ಗೊಬ್ರು, ಬಿಜೆಪಿಗೊಬ್ರು, ಕೆಜೆಪಿಗೊಬ್ರು, ಕೈಗೊಬ್ರು ಕಾಲ್‌ಗೊಬ್ರು. ನಾವೇ ಗ್ರೇಟ್ ಅಲ್ವೇ.
ಅದಿರ‌್ಲೀ... ಅಬ್ಬಬ್ಬಾ ಅದೇನ್ ಬಿಸಲು ಐತಲೇ. ಚಡಿ ಚಡಿ ಚಡಿ ಅನ್ನುತ್ತಲ್ಲೋ ಸೂರ್ಯ. ಚಳಿಗಾಲದಾಗ ಈ ಪರಿ ಬಿಸಲು ಆದ್ರಾ. ಮುಂದ್ ಯಂಗಲೇ.. ಬಿಸಿಲಿಗೆ ಛತ್ರಿ ಗಿತ್ರಿ ತಗೋಬೇಕು ಇಲ್ಲಾಂದ್ರ ಬದುಕೋದ್ ಖರೇ ಇಲ್‌ನೋಡ್ ಅಂತ ಸುಮ್ಕಿರಮ್ಮ ಹೇಳಿದ್ ಮಾತ ಕೇಳಿ
ಯಕ್ಕಾ.... ಇನ್ನೂ ಚಳಿಗಾಲ, ಈಗಲೇ ಶ್ರೀರಾಮುಲು ಛತ್ರಿ ಕೊಟ್ಟರಲ್ಲಾ. ಎಲ್ಲಿ ನೋಡಿದ್ರು ಛತ್ರಿಗಳೇ ಕಾಮ್‌ತವೇ. ನಮ್ಗೆ ಓಟಾಕರು ಎಲ್ಲಿ ನಿಂತಡ್ರು ನೆಳಲು ಇರ‌್ಲಿ ಅಂತ ಕೊಟ್ಟವ್ರೇ. ನೀ ಇಸ್ಕಂಡಿಲ್ವೇ..
ಥತ್ತೆರಿ, ಮೊನ್ನೇ ಊರಮ್ಮನ ಜಾತ್ರೆಗೆ ಹೋಗಿದ್ದೆ ಕಣಲೇ ಎಲ್ಲಿ ನೋಡಿದ್ರು. ಶ್ರೀರಾಮುಲುನೇ ಕಾಣ್ತಾ ಇದ್ದ. ಡೂಪ್ಲೀಕೇಟೇ ಕಾಣ್ತಾವಲ್ಲಾ ಓರಿಜನಲ್ಲು ಎಲ್ಲಪ್ಪಾ ಅಂತ ಹುಡ್ಕಾಡಿದ್ರೆ ಓರಿಜನಲ್ಲೇ ಇರ್‌ಲಿಲ್ಲಾ.
ಜೈಲನ್ನು ಬಿಟ್ಟು ಬಯಲಿಗೆ ಬರೋ ಗೆಳೆಯ ಗೆಳೆಯ ಗೆಳೆಯ
ನೀ ನಿಲ್ಲದೇ ಸೊರಗಿ ಹೋಗಿದೆ ನನ್ನ ಹೃದಯ ಹೃದಯ ಹೃದಯ
ನಾನೇನೇ ಪಲ್ಟಿ ಹೋಡದ್ರು, ನಿನಗೆ ಜಾಮೀನು ಸಿಕ್ತ ಇಲ್ಲಾ.
ನಿನ್ ನೆನಪಲ್ಲೆ ನಾನು, ಇಲ್ಲಿ ಈಗ ಜಾಮೂನು ತಿಂತಾ ಇಲ್ಲಾ.....
ಅಂತ
ಮಾಜಿ ಗಣಿ ಧಣಿ, ಚಡ್ಡಿ ದೊಸ್ತ್ ಜನಾರ್ದನ ರೆಡ್ಡಿ ಮ್ಯಾಲೆ ಶ್ರೀರಾಮುಲು ಹಾಡ್ವ ಹೇಳ್ತಾ ಮನೇಲಿ ಅವ್ರಂತೆ ಅಂದ ಪತ್ರುವಳ್ಳಿ.
ಅಲೊ..್ಲ ಆವಯ್ಯ. ಪಾದಯಾತ್ರೆ ಮಾಡದ್ಕಿಂತ ಮುಂಚೆನರಾ ಈ ಛತ್ರಿಗಳನ್ನು ಕೊಟ್ಟಿದ್ರೆ ಚಂದ್ ಇರೋದಲ್ಲೋ. ಜಾತ್ರಾಗ ಎಲ್ಲಿ ನೋಡಿದ್ರು ಛತ್ರಿ ಛತ್ರಿ ಛತ್ರಿ.
ಭಳರೇ.. ಚಳಿಗಾಲದಲ್ಲೇ ಈ ಪರಿ ಬಿಎಸ್‌ಆರ್ ಬಿಸಿಯಾಗೈತಲ್ಲೋ,
ಅದ್ಕೇ ಕೊಟ್ಟಿರೋದು ಛತ್ರಿವ.. ಈಗಂತೂ ಎಲ್ಲಿ ನೋಡಿದ್ರು
ಶ್ರೀ ರಾಮುಲುನಾ ಛತ್ರಿ ಪೆದ್ದಣ್ಣ. ಛತ್ರಿ ಪೆದ್ದಣ್ಣ ಅಂತಾವ್ರೆ.
ಸುಮ್ಕಿ ಮಾತ್ನ ಕೇಳ್ತಾ ಇದ್ದ ಪಟ್ರೆ.. ಬಿಜೆಪಿ ಕಾಂಗ್ರೇಸ್, ಜೆೆಡಿಎಸ್ ಕಾರ್ಯಕರ್ತರು ಛತ್ರಿ ಹಿಡ್‌ಕಂಡವ್ರೇ.. ಯಕ್ಕೋ ಛತ್ರಿ ಇಸ್ಕಂಡರೆಲ್ಲಾ ಓಟ್ ಹಾಕ್ತಾರಾ.
ಕೊಟ್ಟಂನ್ ಕೋಡಂಗಿ ಇಸ್ಕಂಡನ್ ಈರಭದ್ರ. ಅಂದಂಗೆ ಹಾಗೈತೆ.
ಈಗಂತೂ ಅಣ್ಣಯ್ಯ ಕೋಟಿ ರೂಪಾಯಿ ಹಮ್ಮರ್ ಕಾರಲ್ಲೇ ಓಡಾಡ್ತಾರೇ, ನಾವೆಲ್ಲಾ ಬಿಸ್‌ಲಾಗೆ ಅವರೆಲ್ಲಾ ಓಸಿ ಕಾರಾಗೆ
- ಮಾಲತೇಶ್ ಅರಸ್ ಹರ್ತಿಮಠ
No comments:
Post a Comment